ತಾಲ್ಲೂಕಿನ ರಸ್ತೆಗಳನ್ನು ಈ ಕೂಡಲೇ ಸುಧಾರಣೆ ಮಾಡಬೇಕು ಎಂದು ಆಗ್ರಹಿಸಿ ಜುಲೈ 30 ರಂದು ತಾಲ್ಲೂಕಿನ ಝುಳಕಿ ಗ್ರಾಮದ ಬಳಿ ಹೆದ್ದಾರಿ ತಡೆದು ಪ್ರತಿಭಟಿಸಲಾಗುವುದು ಎಂದು ಇಂಡಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಿ ಡಿ۔ ಪಾಟೀಲ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಂಡಿ ತಾಲ್ಲೂಕಿನ ಎಲ್ಲಾ ರಸ್ತೆಗಳು ಸಂಪ್ರೂರ್ಣ ಹದಗೆಟ್ಟಿವೆ ಮೊಣಕಾಲುದ್ದ ಗುಂಡಿಗಳು ಬಿದ್ದಿವೆ ಈ ಬಗ್ಗೆ ಸಾಕಷ್ಟು ಸಲ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಪ್ರಯೋಜನವಾಗಿಲ್ಲ ಗುಂಡಿ ಬಿದ್ದ ರಸ್ತೆಗಳಲ್ಲಿ ವಾಹನ ಸವಾರರು ಅಡ್ಡಾಡುವುದು ದುಸ್ತರವಾಗಿದೆ. ದ್ವಿಚಕ್ರವಾಹನ ಸವಾರರು ಎಷ್ಟೋ ಜನ ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ ಎಂದಿರುವ ಅವರು ಅಂದು ಬೆಳಿಗೆ 10.30 ಕ್ಕೆ ತಾಲ್ಲೂಕಿನ ಝುಳಕಿ ಜೆವೂರ ಅಂಜುಟಗಿ ಅರ್ಜನಾಳ ಬಳ್ಳೊಳ್ಳಿ ಕಪನಿಂಬರಗಿ ಮೈಲಾರ ಭತಗುಣಕಿ ಬಬಲಾದ ಮುಂತಾದ ಗ್ರಾಮಗಳ ನೂರಾರು ರೈತರು ನಾಗರಿಕರು ಹೆದ್ದಾರಿ ತಡೆ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಈ ರಸ್ತೆ ತಡೆ ಪ್ರತಿಭಟನೆಯಲ್ಲಿ ತಾಲ್ಲೂಕಿನ ಇನ್ನಿತರ ಗ್ರಾಮಗಳ ಹೆಚ್ಚಿನ ನಾಗರಿಕರು ಭಾಗವಹಿಸಬೇಕು ಎಂದು ಬಿ ಡಿ۔ ಪಾಟೀಲ ಮನವಿ ಮಾಡಿಕೊಂಡಿದ್ದಾರೆ.