ಆರೋಪಿತನಾದ ಖೋಬಣ್ಣ ತಂ.ಮಹಾದೇವ ಕೋಳಿ, ಸಾ|| ಶಿರನಾಳ ಈತನು ದಿ : 24-08-2019 ರಂದು ಸಾಯಂಕಾಲ 6-30 ಗಂಟೆ ಸುಮಾರಿಗೆ ಇಂಡಿ ತಾಲೂಕಿನ ಶಿರನಾಳ ಗ್ರಾಮದ ಬಾಂದಾರ ಹತ್ತಿರ ವಾಹನ ತಪಾಸಣೆ ನಡೆಸುತ್ತಿರುವ ಸಮಯದಲ್ಲಿ ದ್ವೀ-ಚಕ್ರ ವಾಹನದ ಮೇಲೆ ಅಕ್ರಮವಾಗಿ ಮಾರಾಟಾದ ಉದ್ದೇಶಕ್ಕಾಗಿ ಕಳ್ಳಭಟ್ಟಿ ಸಾಗಾಟ ಮಾಡುತ್ತಿರುವಾಗ ಅಂದಾಜು 100 ಎಂ.ಎಲ್.ದ 120 ಕಳ್ಳಭಟ್ಟಿ ಸರಾಯಿ ಪಾಕೀಟುಗಳು ಒಟ್ಟು-12 ಲೀಟರ್ ಕಳ್ಳಬಟ್ಟಿ ಸರಾಯಿಯನ್ನು ಕಪ್ಪು ಬಣ್ಣದ ಹಿರೋ ಹೊಂಡಾ ದ್ವೀ-ಚಕ್ರ ವಾಹನ ನಂ-ಎಂ.ಎಚ್-13/ಡಬ್ಲ್ಯೂ- 8582ನೇದ್ದರ ಮೇಲೆ ಸಾಗಾಟ ಮಾಡುತ್ತಿರುವ ಮಾಹಿತಿ ಮೇರೆಗೆ ತಮ್ಮ ಸಿಬ್ಬಂದಿಯೊಂದಿಗೆ ಅಬಕಾರಿ ಉಪ- ನಿರೀಕ್ಷಕರಾದ ಶ್ರೀ ರಾಹುಲ್ ಎಸ್.ನಾಯಕ, ಇವರು ಆರೋಪಿತನಿಗೆ ದಸ್ತಗಿರಿ ಮಾಡಿ ಆರೋಪಿತನ ಮೇಲೆ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 32(1), 34 ಮತ್ತು 38(ಎ) ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.
ನಂತರ ಸದರಿ ಪ್ರಕರಣವನ್ನು ಶ್ರೀ ಶರಣಗೌಡ ಎಂ. ಬಿರಾದಾರ ಅಬಕಾರಿ ಉಪ ನಿರೀಕ್ಷಕರು-2, ಇಂಡಿ ಇವರು ತನಿಖೆ ಕೈಗೊಂಡು ಆರೋಪಿತನ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಅದರಂತೆ ಮಾನ್ಯ ಸಿ.ಜೆ. & ಜೆ.ಎಂ.ಎಫ್.ಸಿ.ನ್ಯಾಯಾಲಯ, ಇಂಡಿಯ ಗೌರವಾನ್ವಿತ ನ್ಯಾಯಾಧೀಶರಾದ ಶ್ರೀ ಈಶ್ವರ ಎಸ್.ಎಮ್. ಇವರು ಸದರಿ ಪ್ರಕರಣದ ವಾದ ವಿವಾದಗಳನ್ನು ಆಲಿಸಿ ಆರೋಪಿತನಿಗೆ ಕರ್ನಾಟಕ ಅಬಕಾರಿ ಕಾಯ್ದೆ ಕಲಂ : 32(1) ರ ಪ್ರಕಾರ 1 ವರ್ಷ ಕಠಿಣ ಕಾರಾಗೃಹ (ಜೈಲು) ಶಿಕ್ಷೆ ಹಾಗೂ ರೂ.10,000=00 ದಂಡ ವಿಧಿಸಿದೆ, ದಂಡ ಭರಿಸದಿದ್ದರೆ ಹೆಚ್ಚುವರಿಯಾಗಿ 6 ತಿಂಗಳ ಸಾದಾ ಕಾರಾಗ್ರಾಹ ಶಿಕ್ಷೆ ಮತ್ತು ಅಬಕಾರಿ ಕಾಯ್ದೆ ಕಲಂ 34 ರ ಪ್ರಕಾರ 1 ವರ್ಷ ಕಠಿಣ ಕಾರಾಗೃಹ (ಜೈಲು ಶಿಕ್ಷೆ ಹಾಗೂ ರೂ.10,000=00 ದಂಡ ವಿಧಿಸಿದೆ, ದಂಡ ಭರಿಸದಿದ್ದರೆ ಹೆಚ್ಚುವರಿಯಾಗಿ 6 ತಿಂಗಳ ಸಾದಾ ಕಾರಾಗ್ರಾಹ ಶಿಕ್ಷೆ ಹಾಗೂ ಕರ್ನಾಟಕ ಅಬಕಾರಿ ಕಾಯ್ದೆ ಕಲಂ : 38(ಎ) ರ ಪ್ರಕಾರ 1 ವರ್ಷ ಕಠಿಣ ಕಾರಾಗೃಹ (ಜೈಲು) ಶಿಕ್ಷೆ ಹಾಗೂ ರೂ.10,000=00 ದಂಡ ವಿಧಿಸಿದ್ದಾರೆ. ದಂಡ ಭರಿಸದಿದ್ದರೆ ಹೆಚ್ಚವರಿಯಾಗಿ 6 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ದಿನಾಂಕ : 14-03-2024 ರಂದು ತೀರ್ಪು ನೀಡಿರುತ್ತಾರೆ. ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಶ್ರೀ ಇಬ್ರಾಹಿಂ ತಂ.ಖಾದರಸಾಬ ಗಟ್ಟಿಮಹಲ ಇವರು ವಾದ ಮಂಡಿಸಿದ್ದರು. ಸದರಿ ವಿಷಯವನ್ನು ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸಲು ಈ ಮೂಲಕ ಕೋರಿದೆ.