ಇಂಡಿ : ಭೀಮಾಶಂಕರ ಕಾರ್ಖಾನೆಯ ಮೇಲೆ ಕಳೆದ ಐದು ವರ್ಷಗಳಲ್ಲಿ 278 ಕೋಟಿ ರೂ ಸಾಲ ಪಡೆದಿದ್ದು 143 ಕೋಟಿ ರೂ ಹಾನಿಯಾಗಿದೆ ಮತ್ತು ಪ್ರತಿ ವರ್ಷ 28 ಕೋಟಿ ರೂ ನಷ್ಟವಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಕಾಸುಗೌಡ ಬಿರಾದಾರ ಹೇಳಿದರು.
ಅವರು ಭೀಮೆಯ ದಡದಲ್ಲಿ ಭೀಮಾಶಂಕರ ಕಾರ್ಖಾನೆ ಚುನಾವಣೆ ಪ್ರಚಾರಾರ್ಥ ಡಾ|| ಸಾರ್ವಭೌಮ ಬಗಲಿ, ನಾಗನಾಥ ಬಿರಾದಾರ, ಮುತ್ತಪ್ಪ ಪೋತೆ ಅಭ್ಯರ್ಥಿಗಳ ಗುಂಪಿನಿಂದ ನಡೆದ ಪಟ್ಟಣದ ಅಮರ ಇಂಟರ್ ನ್ಯಾಶನಲ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಕಬ್ಬು ಕಟಾವು ಮಾಡುವಾಗ ಕಬ್ಬು ಸಾಗಿಸುವ ಅಥವಾ ಕಾರ್ಖಾನೆಯಲ್ಲಿ ಕಬ್ಬು ನುರಿಸುವಾಗ ಅಪಘಾತ ಸಂಭವಿಸಿ ರೈತರು ಕಾರ್ಮಿಕರು ಮೃತ ಪಟ್ಟರೆ ಅವರಿಗೆ ೫ ಲಕ್ಷ ಪರಿಹಾರವನ್ನು ನೀಡಲಾಗುವದು, ಮತ್ತು ಅಪಘಾತಗೊಂಡು ಆಸ್ಪತ್ರೆಗೆ ದಾಖಲಾದರೆ ಅವರ ವೈದ್ಯಕೀಯ ವೆಚ್ಚವನ್ನು ಕಾರ್ಖಾನೆಯಿಂದ ಭರಿಸಲಾಗುವದು,ಜಮೀನಿನಲ್ಲಿ ಬೆಳೆದಿರುವ ಕಬ್ಬು ವಿದ್ಯುತ್ ಹಾಗೂ ಬೆಂಕಿಯಿಂದ ಸುಟ್ಟರೆ ಕೂಡಲೇ ಇಂತಹ ಕಬ್ಬನ್ನು ಕೂಡಲೇ ಕಾರ್ಖಾನೆಗೆ ಸಾಗಿಸಲಾಗುವದು ಎಂದರು.
ಜೆ ಡಿ ಎಸ್ ಮುಖಂಡ ಬಿ.ಡಿ.ಪಾಟೀಲ ಮಾತನಾಡಿ ಕಾರ್ಖಾನೆಯಲ್ಲಿ ಈಥನಾಲ ಉತ್ಪಾದನೆ ಪ್ರಾರಂಭಿಸಿ ಮತ್ತು ಮಳ್ಳಿ ಬೂದಿ, ವಿದ್ಯುತ್ ಉತ್ಪಾದನೆಯಿಂದ ಬಂದ ಲಾಭಾಂಶ ರೈತರಿಗೆ ಹಂಚಲಾಗುವದು, ಕಾರ್ಖಾನೆಯ ಪ್ರತಿ ಷೇರುದಾರರಿಗೆ ೫೦ % ಸಬ್ಸಿಡಿ ದರದಲ್ಲಿ ಪ್ರತಿ ವರ್ಷ ೫೦ ಕೆಜಿ ಸಕ್ಕರೆ ವಿತರಣೆ, ಕಬ್ಬಿನ ತೂಕಕ್ಕೆ ಸರಕಾರದಿಂದ ಇಲೆಕ್ಟಾçನಿಕ್ ತೂಕದ ಮಷೀನು, ಜಿಲ್ಲೆಯಲ್ಲಿ ಸಹಕಾರಿ ಕಾರ್ಖಾನೆಗಳು ಕಬ್ಬಿಗೆ ನೀಡುತ್ತಿರುವ ದರಕ್ಕಿಂತ ಹೆಚ್ಚಿನ ೧೦೦ ರೂ ಹೆಚ್ಚಿನ ದರವನ್ನು ನೀಡಲಾಗುತ್ತದೆ ಎಂದರು. ಶ್ರೀಶೈಲಗೌಡ ಬಿರಾದಾರ ಮಾತನಾಡಿ ಸಧ್ಯ ಕಾರ್ಖಾನೆಯಲ್ಲಿ ಶೇ ೫೫ ಹೆಚ್ಚು ಬೇರೆ ರಾಜ್ಯದ ಉದ್ಯೋಗಿಗಳಾಗಿದ್ದು ಅದನ್ನು ಸ್ಥಳೀಯ ರೈತರ ಮಕ್ಕಳಿಗೆ ನೀಡಲಾಗುವದು ಮತ್ತು ಮಹಿಳಾ ಉದ್ಯೋಗಿಗಳ ಪ್ರಮಾಣ ಅತೀ ಕಡಿಮೆ ಇದ್ದು ಶೇ ೩೩ ರಷ್ಟು ಮಹಿಳಾ ಉದ್ಯೋಗಿಗಳನ್ನು ತುಂಬಲಾಗುವದು ಎಂದರು.
ಎಸ್.ಬಿ.ಐ ನಿವೃತ್ತ ಸಿಬ್ಬಂದಿ ಮುಕುಂದ ಕಾಂಬಳೆ ಮಾತನಾಡಿ ಅರ್ಥಿಕ ಸಂಕಷ್ಟ ದಲ್ಲಿರುವ ಕಬ್ಬು ಬೆಳೆಗಾರರಿಗೆ ಅವಶ್ಯವಿರುವ ಗೊಬ್ಬರವನ್ನು ಪೂರೈಸಿ ಆ ಹಣವನ್ನು ಕಬ್ಬಿನ್ ಬಿಲ್ ನಲ್ಲಿ ಸಂದಾಯ ಮಾಡುವಾಗ ಮರು ಪಡೆಯಲಾಗುವದು ಎಂದರು. ಭೀಮಾಶಂಕರ ಕಾರ್ಖಾನೆಯ ಚುನಾವಣೆ ಯಲ್ಲಿ ಸ್ಪರ್ಧಿಸಿದ ಮಾಜಿ ಶಾಸಕ ಡಾ|| ಸಾರ್ವಭೌಮ ಬಗಲಿ,ನಾಗನಾಥ ಬಿರಾದಾರ, ಮುತ್ತಪ್ಪ ಪೋತೆ ಮಾತನಾಡಿ ಭೀಮಾಶಂಕರ ಕಾರ್ಖಾನೆಯಲ್ಲಿ ಆಗುತ್ತಿರುವ ಸೋರಿಕೆ ತಡೆದು ಮೂವರು ಪ್ರಭಲ ಶಕ್ತಿಯಾಗಿ ಕಾರ್ಖಾನೆಯನ್ನು ಹಾನಿಯಿಂದ ಲಾಭದ ಕಡೆಗೆ ತೆಗೆದುಕೊಂಡು ಹೋಗುವದಾಗಿ ಭರವಸೆ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಜೆಡಿ ಎಸ್ ಮುಖಂಡ ಅಯೂಬ ನಾಟಿಕಾರ, ಶಿವು ದೇವರ, ನಾಗೇಶ ಶಿವಶರಣ, ಸಂಕೇತ ಬಗಲಿ, ಮಲ್ಲು ಹಾವಿನಾಳಮಠ ಮತ್ತಿತರಿದ್ದರು.