ದೇಶದ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಅಮೃತ ಮಹೋತ್ಸವ ಎಂದು ದೇಶದ ಪ್ರತಿಯೊಬ್ಬರು ಹಬ್ಬದಂತೆ ಆಚರಣೆ ಮಾಡಬೇಕು ಎಂಬ ಉದ್ದೇಶದೊಂದಿಗೆ ಇದೇ ಆಗಸ್ಟ್. 13 ರಿಂದ ಆ. 15 ರ ವರೆಗಿನ 3 ದಿನಗಳ ಕಾಲ ಮನೆ ಮನೆಯಲ್ಲಿಯೂ ರಾಷ್ಟ್ರಧ್ವಜ ಹಾರಿಸಲು ಜನರಿಗೆ ಅನುಕೂಲವಾಗುವಂತೆ ತಹಶಿಲ್ದಾರ ಕಚೇರಿಯಲ್ಲಿ ಧರಂಸಿಂಗ್ ಫೌಂಡೇಷನ್ ವತಿಯಿಂದ 50 ಸಾವಿರ ಬಾವುಟಗಳನ್ನು ತಾಲೂಕಿನ ಆಡಳಿತಕ್ಕೆ ಹಸ್ತಾಂತರಿಸಲಾಯಿತು.
ತಂದೆಯವರಾದ ದಿ.ಧರಂಸಿಂಗ್ ಸ್ಮರಣಾರ್ಥ ಇರುವಂತಹ ಪ್ರತಿಷ್ಠಾನದ ಮೂಲಕವೇ ಜಿಲ್ಲಾಡಳಿತದಿಂದ 50 ಸಾವಿರ ಧ್ವಜಗಳನ್ನು ಖರೀದಿಸಲಾಗಿದೆ. ಇವನ್ನೆಲ್ಲ ಜೇವರ್ಗಿ ಹಾಗೂ ಯಡ್ರಾಮಿ ತಾಲೂಕುಗಳಲ್ಲಿ ಜನತೆಗೆ ಉಚಿತವಾಗಿ ನೀಡಲಾಗುತ್ತಿದೆ. ಪ್ರತಿಯೊಬ್ಬರೂ ಮನೆಗಳ ಮೇಲೆ 3 ದಿನ ಧ್ವಜಾರೋಹಣ ಮಾಡುವ ಮೂಲಕ ಅಮೃತ ಸ್ವಾತಂತ್ರ್ಯ ಮಹೋತ್ಸವ ಸಂಭ್ರಮಿಸಬೇಕು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸಂಜೀವಕುಮಾರ ದಾಸರ, ಯಡ್ರಾಮಿ ತಹಶೀಲ್ದಾರ್ ಶಾಂತಗೌಡ ಬಿರಾದಾರ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿದ್ದು ಪಾಟೀಲ, ಕ್ಷೇತ್ರಶಿಕ್ಷಣಾಧಿಕಾರಿ ಶೋಭಾ ತಾಳಿಕೋಟಿ, ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಅಲ್ಲಾವುದ್ದೀನ್ ಸಾಗರ, ಆಹಾರ ಇಲಾಖೆಯ ಶಿರಸ್ತೇದಾರ ಡಿ.ಬಿ. ಪಾಟೀಲ, ಮುಖಂಡರಾದ ಸಿದ್ದಲಿಂಗರೆಡ್ಡಿ ಇಟಗಿ, ರುಕುಂ ಪಟೇಲ ಇಜೇರಿ, ರಾಜಶೇಖರ ಸೀರಿ, ಕಾಶಿರಾಯಗೌಡ ಯಲಗೋಡ, ಚಂದ್ರಶೇಖರ ಹರನಾಳ, ಶಾಂತಪ್ಪ ಕೂಡಲಗಿ, ಖಾಸಿಂ ಪಟೇಲ್ಮಾಜಿ ಜಿಲ್ಲಾ ಪಂಚಾಯಿತಿ membar ಮುದವಾಳ, ಮಹಿಮೂದ್ ನೂರಿ, ನೀಲಕಂಠ ಅವಂಟಿ, ಚಂದ್ರಶೇಖರ ನೇರಡಗಿ, ಮುಖಂಡರಾದ ಹಣಮಂತರಾವ ಭೂಸನೂರ್, ಮರೆಪ್ಪ ಸರಡಗಿ ಯೂಥ್ ಕಾಂಗ್ರೆಸ್ ಅಧ್ಯಕ್ಷ ರಿಯಾಜ್ ಖಾಸಿಂ ಪಟೇಲ್ ಸುನಿಲ್ ಹಳ್ಳಿ ಇದ್ದರು.