ಕೋವಿಡ್ ರೂಪಾಂತರಿ ವೈರಸ್ BF.7 ಪ್ರಪಂಚದಾದ್ಯಂತ ಹರಡುತ್ತಿದೆ.ಹಾಗಾಗಿ, ಭಾರತದಲ್ಲಿ 7 ದಿನಗಳ ಕಾಲ ಕರ್ಥ್ಯ ಜಾರಿಯಾಗಲಿದೆ ಎಂಬ ಸುದ್ದಿ ಅನೇಕ ಯೂಟ್ಯೂಬ್ ಚಾನೆಲ್ಗಳಲ್ಲಿ ಹರಡುತ್ತಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ತುರ್ತು ಸಭೆ ನಡೆಸುತ್ತಿದ್ದಾರೆ. ಎಂಬ ಸುದ್ದಿ ಹಬ್ಬಿದೆ. ಆದರೆ, ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಕೇಂದ್ರ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ.ವಿಡಿಯೋದಲ್ಲಿರುವ ಸುದ್ದಿ ವದಂತಿಗಳಾಗಿದ್ದು, ಸರ್ಕಾರ ಅಂತಹ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ. ಪ್ರಸ್ತುತ ವಾತಾವರಣದಲ್ಲಿ ವಿಮಾನಗಳನ್ನು ರದ್ದುಗೊಳಿಸುವ ಮತ್ತು ಕರ್ಪೂ ಜಾರಿಗೊಳಿಸುವ ಅಗತ್ಯವಿಲ್ಲ ಎಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ.