ರಾಜ್ಯವಿಧಾನಸಭಾ ಚುನಾವಣೆ ನಾಮಪತ್ರ ಹಿಂಪಡೆಯುವ ಅಂತಿಮ ದಿನವಾದ ಸೋಮವಾರದಂದು ಎಂಟು ವಿಧಾನ ಸಭೆ ಕ್ಷೇತ್ರಗಳ 20 ಉಮೇದುವಾರರು ಕಣದಿಂದ ಹಿಂದೆ ಸರಿದಿದ್ದಾರೆ ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಹೇಳಿದರು.ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು 115 ಜನ ನಾಮಪತ್ರ ಸಲ್ಲಿಸಿದ್ದು, ಆ ಪೈಕಿ 20 ಜನ ನಾಮಪತ್ರ ವಾಪಸ್ ಪಡೆದಿದ್ದಾರೆ.ಅಂತಿಮವಾಗಿ 95 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮುದ್ದೇಬಿಹಾಳ- 8, ದೇವರಹಿಪ್ಪರಗಿ- 13, ಬ.ಬಾಗೇವಾಡಿ- 13, ಬಬಲೇಶ್ವರ- 14, ವಿಜಯಪುರ ನಗರ-14, ನಾಗಠಾಣ- 15, ಇಂಡಿ- 9, ಸಿಂದಗಿ-9 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ ಎಂದರು.