ಇಂಡಿ ಹಿರೇರೂಗಿ ರಸ್ತೆಯ ಶಾಂತಿನಗರದ ಬಸ್ಸ್ಟ್ಯಾಂಡ ಎದುರಿಗೆ ದ್ವಿ-ಚಕ್ರವಾಹನ ನಂ.- ಕೆಎ-28/ಇಡು-1115ನೇದ್ದರ ಮೇಲೆ ದಾಳಿ ಮಾಡಲಾಗಿ ಆರೋಪಿತರು ಯಲ್ಲಪ್ಪ ಮೂಲಿಮನಿ, ಸಾ॥ ಹಿರೇರೂಗಿ, ತಾ॥ ಇಂಡಿ, ಹಾಗೂ ಕೆಂಚಪ್ಪಾ ಮೂಲಿಮನಿ ಸಾ॥ ಹಿರೇರೂಗಿ, ತಾ।। ಇಂಡಿ, ತನ್ನ ಹತ್ತಿರ ಯಾವುದೇ ಲೈಸನ್ಸ್ -ವ- ಪರವಾಣಿಗೆ ಇಲ್ಲದೇ ಅನಧೀಕೃತವಾಗಿ ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಕೈಚೀಲದಲ್ಲಿ ನೀಲಿ ಬಣ್ಣದ ಪ್ಲಾಸ್ಟಿಕ ಕವರದಲ್ಲಿ ಒಟ್ಟು 950 ಗ್ರಾಂ ಒಣಗಿದ ಗಾಂಜಾವನ್ನು ಮಾರಾಟ ಮಾಡಲು ತನ್ನ ತಾಬಾದಲ್ಲಿ ಇಟ್ಟುಕೊಂಡು ಸಾಗಾಣಿಕೆ ಮಾಡುತ್ತಿದ್ದಾಗ ಸಿಕ್ಕಿದ್ದು, ಮಾಹಿತಿ ಮೇರೆಗೆ ತಮ್ಮ ಸಿಬ್ಬಂದಿಯೊಂದಿಗೆ ಅಬಕಾರಿ ಉಪ-ನಿರೀಕ್ಷಕರಾದ ಶ್ರೀ ವಿಜಯಕುಮಾರ ಹಿರೇಮಠ ಅಬಕಾರಿ ಉಪ-ನಿರೀಕ್ಷಕರು-2, ಇಂಡಿ ಇವರು ಆರೋಪಿತರಿಗೆ ದಸ್ತಗಿರಿ ಮಾಡಿ ಆರೋಪಿತರ ಮೇಲೆ ಎನ್.ಡಿ.ಪಿ.ಎಸ್.ಕಾಯ್ದೆ-1985 ರ ಕಲಂ 8(ಸಿ) ರ ಉಲ್ಲಂಘನೆ ಹಾಗೂ ಕಲಂ 20(ಬಿ) (ii)(ಎ), 25 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.
ನಂತರ ಸದರಿ ಪ್ರಕರಣವನ್ನು ಶ್ರೀ ಎಂ.ಹೆಚ್.ಪಡಸಲಗಿ, ಅಬಕಾರಿ ಉಪ-ನಿರೀಕ್ಷಕರು, ಇಂಡಿ ಇವರು ತನಿಖೆ ಕೈಗೊಂಡು ಆರೋಪಿತರ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಅದರಂತೆ ಮಾನ್ಯ ಸಿ.ಜೆ. & ಜೆ.ಎಂ.ಎಫ್.ಸಿ.ನ್ಯಾಯಾಲಯ, ಇಂಡಿಯ ಗೌರವಾನ್ವಿತ ನ್ಯಾಯಾಧೀಶರಾದ ಶ್ರೀ ಈಶ್ವರ ಎಸ್.ಎಮ್. ಇವರು ಸದರಿ ಪ್ರಕರಣದ ವಾದ ವಿವಾದಗಳನ್ನು ಆಲಿಸಿ ಆರೋಪಿತನಿಗೆ ಕರ್ನಾಟಕ ಅಬಕಾರಿ ಕಾಯ್ದೆ ಕಲಂ : ಎನ್.ಡಿ.ಪಿ.ಎಸ್.ಕಾಯ್ದೆ-1985 ರ ಕಲಂ 8(ಸಿ) ರ ಉಲ್ಲಂಘನೆ ಹಾಗೂ ಕಲಂ 20(ಬಿ)(ii)(ಎ), 25 ರ ಪ್ರಕಾರ ಒಬ್ಬೊಬ್ಬರಿಗೆ 6 ತಿಂಗಳು ಕಠಿಣ ಕಾರಾಗೃಹ (ಜೈಲು) ಶಿಕ್ಷೆ ಹಾಗೂ ಇಬ್ಬರು ಆರೋಪಿತರಿಗೆ 5,000=00 ದಂಡ ವಿಧಿಸಿ, ದಂಡ ಭರಿಸದಿದ್ದರೆ ಮೂರು ತಿಂಗಳ ಹೆಚ್ಚುವರಿಯಾಗಿ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ದಿನಾಂಕ : 12-01-2024 ರಂದು ತೀರ್ಪು ನೀಡಿರುತ್ತಾರೆ. ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಶ್ರೀ ಇಬ್ರಾಹಿಂ ತಂ.ಖಾದರಸಾಬ ಗಟ್ಟಿಮಹಲ ಇವರು ವಾದ ಮಂಡಿಸಿದ್ದರು.