ಇಂಡಿಯ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಮ್ಮ ಮಗು ಮಹಮ್ಮದ ಮತ್ತು ಮಗಳಿಗೆ ಪೋಲಿಯೊ ಹನಿ ಹಾಕುವ ಮೂಲಕ ತಾಲೂಕಿನಲ್ಲಿ ಪೊಲಿಯೊ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು.
ತಾಲೂಕಿನಲ್ಲಿ ಮಾರ್ಚ ೩ ರಿಂದ ೪ ದಿನಗಳ ಕಾಲ ನಡೆಯಲಿದೆ. ೫ ವರ್ಷದೊಳಗಿನ ೬೧೬೨೯ ಕ್ಕೂ ಹೆಚ್ಚು ಮಕ್ಕಳಿಗೆ ಪೊಲಿಯೊ ಹನಿ ಹಾಕುವ ಗುರಿ ಹೊಂದಲಾಗಿದೆ ಸಂಜೆಯ ವರೆಗೆ ಶೇ ೯೬ ರಷ್ಟು ೫೯೧೬೩ ಮಕ್ಕಳಿಗೆ ಪೋಲಿಯೊ ಹಾಕಲಾಗಿದೆ ಎಂದು ಗದ್ಯಾಳ ತಿಳಿಸಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ಡಾ|| ವಿಪುಲ್ ಕೋಳೆಕರ, ವಿಜಯಲಕ್ಷಿö್ಮÃ ಹಾದಿಮನಿ, ಗುರಸಂಗವ್ವ ಹಿರೇಪಟ್ಟ,ವೀರಕ್ಷಾ ಕೋಳಿ, ರೇಖಾ ಬಿದರಿ,ಬಸವರಾಜ ಧವಳಗಿ ಮತ್ತಿತರಿದ್ದರು.
ತಾಲೂಕಿನಲ್ಲಿ ಇಂಡಿಯ ಸಾರ್ವಜನಿಕ ಕೇಂದ್ರ ಸೇರಿದಂತೆ ತಾಲೂಕಿನ ಎಲ್ಲ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾ.ಪಂ ಕಚೇರಿ, ಶಾಲೆ, ಅಂಗನವಾಡಿ ಕೇಂದ್ರಗಳು, ದೇವಸ್ಥಾನಗಳಲ್ಲಿ ಪೊಲಿಯೊ ಹಾಕಲಾಯಿತು.
ಒಟ್ಟು ೨೬೪ ಕೇಂದ್ರಗಳಲ್ಲಿ , ಒಟ್ಟು ೫೨೮ ಸಿಬ್ಬಂದಿ, ೫೩ ಜನ ಸುಪರವಾಯಿಜರ್ ಪಾಲ್ಗೊಂಡಿದ್ದರು.
ಪ್ರತಿ ತಂಡದಲ್ಲಿ ತಲಾ ಇಬ್ಬರು ಪೊಲಿಯೊ ಹನಿ ಹಾಕುವ ಸಿಬ್ಬಂದಿ ಮತ್ತು ತಲಾ ಇಬ್ಬರು ಸಹಾಯಕರು ಇದ್ದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಅಂಗನವಾಡಿ ಕಾರ್ಯಕರ್ತೆಯರ, ಶಿಕ್ಷಣ, ಸಾರಿಗೆ, ಕಂದಾಯ ಮೊದಲಾದ ಸರಕಾರಿ ಇಲಾಖೆಗಳಲ್ಲದೆ , ಲಯನ್ಸ ಸೇರಿದಂತೆ ಅನೇಕ ಸಂಘಟನೆಗಳ ಸಹಯೋಗ ನೀಡಿದರು. ನಗರ ಪ್ರದೇಶದಲ್ಲಿ ೪,೫ ಮತ್ತು ೬ ರಂದು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮಾರ್ಚ ೪ ಮತ್ತು ೫ ರಂದು ಮನೆ ಮನೆ ತೆರಳಿ ೫ ವರ್ಷದೊಳಗಿನ ಮಕ್ಕಳಿಗೆ ಪೊಲಿಯೊ ಹನಿ ಉಳಿದ ಶೇ ೫ ರಷ್ಟು ಮಕ್ಕಳಿಗೆ ನೀಡಲಾಗುತ್ತಿದೆ.