ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಮಸೂತಿ-ಕೂಡಗಿ ರಸ್ತೆಯ ಮೇಲ್ವೇತುವೆಯ ಕೆಳಗಡೆ ಹಾಯ್ದುಹೋಗುವ ಗದಗ-ವಿಜಯಪೂರ ರೈಲ್ವೆ ಮಾರ್ಗದಲ್ಲಿ ರೈಲು ಡಿಕ್ಕಿ ಹೊಡೆದು ಸುಮಾರು 96 ಕುರಿಗಳು ಸಾವನ್ನಪ್ಪಿರುವ ಘಟಣೆ ಸಂಬವಿಸಿದೆ.
ಸಾಯಂಕಾಲ ಸಮಯದಲ್ಲಿ ಮಳೆ ಬರುತ್ತಿರುವ ಸಂದರ್ಬದಲ್ಲಿ ಸೇತುವೆ ಕೆಳಗಡೆ ಚಾಟಿಗೆ ನಿಂತ ಕುರಿಗಾರರು ಒಂದು ರೈಲ್ವೆ ಹೋದ ನಂತರ ಕುರಿಗಳನ್ನು ಹಳಿ ದಾಟಿಸುವ ಸಂದರ್ಬದಲ್ಲಿ ಮತ್ತೊಂದು (ಗದಗ-ಮುಂಬೈ) ರೈಲು ಹಾಯ್ದು ಈ ದುರ್ಘಟಣೆ ನಡೆದಿದೆ.
ವೇಗವಾಗಿ ಚಲಿಸುತ್ತಿರುವ ರೈಲಿನ ರಬಸಕ್ಕೆ ಪೆಟ್ಟು ತಿಂದು ಕುರಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಕೊಲ್ಹಾರ ತಾಲೂಕಿನ ತಳೆವಾಡ ಗ್ರಾಮದ ಕುರಿಗಾರರಾದ ಶಿವಪ್ಪ ಕಲ್ಲಪ್ಪ ಮೂಕನ್ನವರ -25 ಕುರಿ, ಚಂದ್ರಪ್ಪ ಖರ್ಗೆ-43 ಮತ್ತು ಶೇಕಪ್ಪ ಮೂಕನವರ ಮತ್ತು ಮಲ್ಲಪ್ಪ ಕಾಡಸಿದ್ದ-28, ಸೇರಿ 96 ಕುರಿಗಳು ಸಾವನ್ನಪ್ಪಿರುವದು ಎಂದು ಅಂದಾಜಿಸಲಾಗಿದೆ.
ಈ ಕುರಿತು ಮಾಜಿ ಸಚಿವರಾದ ಎಸ್ ಕೆ ಬೆಳ್ಳುಳ್ಳಿ ಘಟನಾಸ್ಥಳಕ್ಕೆ ಆಗಮಿಸಿ ಸಂಬಂಧಿಸಿದ ಅಧಿಕಾರಿಗಳ ಜೊತೆಗೆ ಮಾತನಾಡಿ ಸರ್ಕಾರದಿಂದ ಸಿಗುವ ಎಲ್ಲಾ ಪರಿಹಾರವನ್ನು ಕೊಡಿಸುವ ಪ್ರಾಮಾಣಿಕತೆ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಈ ದುರ್ಘಟಣೆ ಕೂಡಗಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟಣೆ ನಡೆದಿದೆ.
ವರದಿ: ಲಾಲಸಾಬ ಸವಾರಗೋಳ I Today News ವಿಜಯಪುರ