ಎಐಸಿಸಿ ಅಧ್ಯಕ್ಷರಾದ ನಂತರ ಶ್ರೀ Mallikarjun Kharge ಅವರು “ಕಲ್ಯಾಣ ಕ್ರಾಂತಿ ಸಮಾವೇಶದಲ್ಲಿ ಭಾಗಿಯಾಗಲು ಕಲಬುರಗಿಗೆ ಭೇಟಿ ನೀಡಿದಾಗ ಇಂಡಿ ಶಾಸಕರಾದ ಶ್ರೀ ಯಶವಂತರಾಯಗೌಡ ವ್ಹಿ. ಪಾಟೀಲ ರವರು ಆತ್ಮೀಯವಾಗಿ ಸನ್ಮಾನಿಸಿದರು.
ಒಬ್ಬ ಕನ್ನಡಿಗ, ಸಮರ್ಥ ನಾಯಕ ಇಂದು ಕಾಂಗ್ರೆಸ್ನ ಉನ್ನತ ಸ್ಥಾನವನ್ನು ಅಲಂಕರಿಸುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ.ಅವರ ರಾಜಕೀಯ ಅನುಭವ, ಕಾರ್ಯ ಚತುರತೆ ನಮಗೆಲ್ಲರಿಗೂ ಮಾದರಿಯಾದ್ದು. ಅವರ ಮಾರ್ಗದರ್ಶನದಲ್ಲಿ ಮುಂಬರುವ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವು ಖಚಿತ.ಆರ್ಟಿಕಲ್ 371(J) ಜಾರಿಗೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದ ಖರ್ಗೆ ಅವರು, ಹಿಂದುಳಿದ ಸಮುದಾಯದವರಿಗೆ ಸಮಾನ ಸ್ಥಾನಮಾನ ಸಿಗಲು ಸಾಕಷ್ಟು ಹೋರಾಟ ನಡೆಸಿದ್ದಾರೆ. ರಾಷ್ಟ್ರಪಿತ ಗಾಂಧೀಜಿ ಅವರಿದ್ದ ಸ್ಥಾನವನ್ನು ಇಂದು ನಮ್ಮ ಹೆಮ್ಮಯ ಕನ್ನಡಿಗ ಅಲಂಕರಿಸಿರುವುದೇ ಹೆಮ್ಮೆಯ ವಿಚಾರ.ಖರ್ಗೆ ಅವರ ಗೆಲುವು ರಾಜ್ಯದ ಗೆಲುವು, ಇದು ಅಭಿವೃದ್ಧಿಯ ಗೆಲುವು.