ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ 5 ಗ್ಯಾರಂಟಿ ಘೋಷಿಸಿದೆ.ಸದ್ಯ ಈ ಗ್ಯಾರಂಟಿಗಳು ಎಷ್ಟರ ಮಟ್ಟಿಗೆ ಜಾರಿಯಾಗಲಿದೆ ಎಂಬುದು ಕುತೂಹಲ ಮೂಡಿಸಿದೆ. ಈ ನಡುವೆ ಈ ಗ್ಯಾರಂಟಿಗಳ ಈಡೇರಿಸಲು ಬರೋಬ್ಬರಿ 62 ಸಾವಿರ ಕೋಟಿ ಅಗತ್ಯವಿದೆ. ಇದು ರಾಜ್ಯಕ್ಕೆ ಹೆಚ್ಚುವರಿ ಹೊರೆಯಾಗಲಿದ್ಯಾ ಅಥವಾ ಕೊರತೆ ಉಂಟಾಗದಂತೆ ಸರ್ಕಾರ ನಿರ್ವಹಣೆ ಮಾಡಲಿದ್ಯಾ ಎಂಬುದು ತಿಳಿದುಬರಬೇಕಿದೆ. ಇನ್ನು ಕಾಂಗ್ರೆಸ್ ಈ ಯೋಜನೆಗಳ ಜಾರಿಗೆ ಕೇವಲ 47 ಸಾವಿರ ಕೋಟಿ ರೂಪಾಯಿ ಸಾಕಾಗಲಿದೆ ಎನ್ನುತ್ತಿದೆ, ಇದು ರಾಜ್ಯ ಬಜೆಟ್ನ ಶೇ.15ರಷ್ಟು ಎಂದು ತಿಳಿಸಿದೆ.