ನಿನ್ನೆ 2 ಸಾವಿರ ಮುಖಬೆಲೆಯ ನೋಟುಗಳ ರದ್ದು ಆದೇಶ ಹೊರಬಿದ್ದಿದ್ದು, ಬದಲಾಯಿಸಿಕೊಳ್ಳಲು ಸೆಪ್ಟೆಂಬರ್ 30ರ ವರೆಗೆ ಕಾಲಾವಕಾಶ ನೀಡಲಾಗಿದೆ. ಈ ನಡುವೆ ಮತ್ತೆ 1 ಸಾವಿರ ಮುಖಬೆಲೆಯ ನೋಟುಗಳು ಚಲಾವಣೆಗೆ ಬರುವ ಸಾಧ್ಯತೆ ಬಗ್ಗೆ ಚರ್ಚೆ ನಡೆದಿದೆ.ಮತ್ತೆ 1 ಸಾವಿರ ಮುಖಬೆಲೆಯ ನೋಟು ಹೊರಬಂದರೂ ಅಚ್ಚರಿಯಿಲ್ಲ ಅಂತ ಮಾಜಿ ಸಚಿವ ಪಿ ಚಿದಂಬರಂ ಹೇಳಿದ್ದಾರೆ. ಆದರೆ ಆರ್ಬಿಐ ಪ್ರಕಾರ 1 ಸಾವಿರ ಮುಖಬೆಲೆಯ ನೋಟುಗಳ ಚಲಾವಣೆ ತರುವ ಯಾವುದೇ ಯೋಚನೆ ನಮ್ಮಮುಂದಿಲ್ಲಎಂದಿದೆ. ಆದರೆ ಭವಿಷ್ಯದಲ್ಲಿ 1 ಸಾವಿರ ರೂಪಾಯಿ ಬರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.