ಪ್ರಜೆಗಳ ಪ್ರೀತಿ-ವಿಶ್ವಾಸಕ್ಕಿಂತ ಬೆಲೆಬಾಳುವಂಥದ್ದು ಏನೂ ಇಲ್ಲ. ನನಗೆ ಗೌರವ-ಸನ್ಮಾನ ಸಲ್ಲಿಸಲು ಹಾರ-ತುರಾಯಿ, ಪುಷ್ಪಗುಚ್ಛ, ಶಾಲು-ಶಲ್ಯ ನೀಡುವುದನ್ನು ಅತ್ಯಂತ ವಿನಯ ಪೂರ್ವಕವಾಗಿ ಸ್ವೀಕರಿಸದೇ ಇರಲು ನಿರ್ಧರಿಸಿದ್ದೇನೆ.
ಇದು ನನ್ನ ಮನೆ-ಕಚೇರಿ ಹಾಗೂ ಸಾರ್ವಜನಿಕ ಸಮಾರಂಭಗಳಿಗೂ ಅನ್ವಯವಾಗಲಿದೆ. ಕಾಣಿಕೆ ಬದಲು ನಿಮ್ಮ ಉಪಸ್ಥಿತಿ ಹಾಗೂ ಪ್ರೀತಿಯೇ ನನಗೆ ಮಿಗಿಲು…
ಇನ್ನು ಮುಂದೆ ಹೂ ಗುಚ್ಚದ ಬದಲಿಗೆ ಕನ್ನಡ ಪುಸ್ತಕಗಳನ್ನು ಕಾಣಿಕೆಯಾಗಿ ನೀಡಬಹುದು…
ಅಭಿಮಾನಿಗಳ ಶುಭ ಹಾರೈಕೆಗಿಂತ ದೊಡ್ಡ ಉಡುಗೊರೆ ಯಾವುದೂ ಇಲ್ಲ, ನಿಮ್ಮೆಲ್ಲರ ಪ್ರೀತಿ-ಅಭಿಮಾನ ಸದಾ ನನ್ನ ಮೇಲಿರಲಿ ಅದಕ್ಕೆ ನಾನು ಋಣಿಯಾಗಿದ್ದೇನೆ…
*ಯಶವಂತರಾಯಗೌಡ ವ್ಹಿ. ಪಾಟೀಲ*