ಪಡಿತರ ಚೀಟಿಗಳೊಂದಿಗೆ ಆಧಾರ್ ಸಂಖ್ಯೆ ಲಿಂಕ್ ಆಗದೆ, ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಹೆಸರು ನೋಂದಾಯಿಸುವಾಗ ‘ಕಾರ್ಡ್‌ಗಳು ನಿಷ್ಕ್ರಿಯಗೊಂಡಿವೆ’ ಎಂಬ ಸಂದೇಶ ಬರುತ್ತಿದೆ. ಇದರಿಂದ ಬರೋಬ್ಬರಿ 17 ಲಕ್ಷಕ್ಕೂ ಅಧಿಕ ಕಾರ್ಡ್‌ದಾರರು ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಾಗಿಲ್ಲ. ಎಲ್ಲಾ ಗೃಹಿಣಿಯರಿಗೂ ಗೃಹಲಕ್ಷ್ಮಿ ಯೋಜನೆಯ ಫಲ ಸಿಕ್ಕಿಲ್ಲ. 2 ಸಾವಿರ ರೂ. ಪಡೆಯಲು ಬಿಪಿಎಲ್ ಪಡಿತರ ವಿತರಣಾ ಕಾರ್ಡ್ ಹೊಂದಿರಬೇಕು. ಮನೆಯ ಸದಸ್ಯರ ಪೈಕಿ ಮಹಿಳಾ ಸದಸ್ಯರ ಹೆಸರಿನಲ್ಲಿಯೇ ಕಾರ್ಡ್ ಇರಬೇಕು. ಅಂತಹವರನ್ನು ಮಾತ್ರ ಯೋಜನೆಗೆ ಪರಿಗಣಿಸಲಾಗಿದೆ.