ಸಿ ವಿ ರಾಮನ್ ಸೈನ್ಸ್ ಕಾಲೇಜು ವಿದ್ಯಾರ್ಥಿಗಳಿಂದ ಹಾಗೂ ತೇಜಸ್ ಸಾಮಾಜಿಕ ವಿವಿದ್ದೋದ್ದೇಶ ಸಂಘದ ವತಿಯಿಂದ ಇಂದು ಇಂಡಿ ಪ್ರದೇಶವು ಅಭಿವೃದ್ಧಿಯಿಂದ ತೀರ ಹಿಂದುಳಿದ ಪ್ರದೇಶವಾಗಿದ್ದು ಶೈಕ್ಷಣಿಕ ರಾಜಕೀಯ ಆರ್ಥಿಕವಾಗಿ ಪ್ರಗತಿ ಕಾಣಬೇಕಾದರೆ ಇಂಡಿ ಜಿಲ್ಲೆ ಆಗಲೇಬೇಕು ಎಂದು ಘೋಷಣೆ ಕೂಗುವುದರೊಂದಿಗೆ ಕಂದಾಯ ಉಪ ವಿಭಾಗಾಧಿಕಾರಿಗಳ ಮೂಲಕ ಸಿಎಂ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಶಾಲೆಯ ಮುಖ್ಯ ಗುರುಗಳಾದ ಶಿವಾನಂದ ಜಿ ಕೆ, ಸಹ ಶಿಕ್ಷಕರಾದ ಸನ್ಮತಿ ಹಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.