ಇಂಡಿ : ಮಹಾತ್ಮಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಗ್ರಾಮದ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಇಂಗಳಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಿದ್ರಾಯ ಸಿನಿಖೇಡ ಅವರು ಹೇಳಿದರು. ತಾಲೂಕಿನ ಇಂಗಳಗಿ ಗ್ರಾಮದ ಶ್ರೀ ಹನುಮಾನ ದೇವಸ್ಥಾನ ಆವರಣದಲ್ಲಿ ನಡೆದ ಗ್ರಾಮ ಪಂಚಾಯತಿಯ ೨೦೨೪-೨೫ನೇ ಸಾಲಿನ ನರೇಗಾ ಯೋಜನೆಯಡಿ ಕ್ರಿಯಾ ಯೋಜನೆ ತಯಾರಿಸುವ ಕುರಿತು ನಡೆದ ಗ್ರಾಮ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಗ್ರಾಮ ಸಭೆ ಪೂರಕವಾಗಿದೆ. ನರೇಗಾ ಯೋಜನೆಯಡಿಯಲ್ಲಿ ಸಿಗುವ ವೈಯಕ್ತಿಕ ಕಾಮಗಾರಿಗಳಾದ ಕೃಷಿಹೊಂಡ, ಬದು ನಿರ್ಮಾಣ, ಜಾನುವಾರು ಶೆಡ್, ಮೇಕೆ ಶೆಡ್, ಇಂಗು ಗುಂಡಿ ಸೇರಿದಂತೆ ಇನ್ನಿತರ ಸೌಲಭ್ಯಗಳ ಬಗ್ಗೆ ಗ್ರಾಮ ಪಂಚಾಯತಿಗೆ ಭೇಡಿಕೆ ಸಲ್ಲಿಸುವಂತೆ ತಿಳಿಸಿದರು.ಪಂಚಾಯತಿ ಅಧ್ಯಕ್ಷೆ ಲಕ್ಷ್ಮಿಬಾಯಿ ಶಿ ದಶವಂತ, ಗ್ರಾಮ ಪಂಚಾಯತಿ ಕಾರ್ಯದರ್ಶಿ ಹಸೀನಾ ನೆಗಿನಾಳ, ಬಿಲ್ ಕಲೆಕ್ಟರ್ ಗುರಪ್ಪ ಹಕ್ಕಿ ಕಾಯಕ ಮಿತ್ರರಾದ ಮಂಗಲ ರಾಹುಲ್ ಉತ್ತರೆ ಗ್ರಾಮಸ್ಥರು ಹಾಗೂ ಸದಸ್ಯರಾದ ಪೈಗಂಬರ್ ಮನೂರ ಸುನೀಲ ದಶವಂತ, ಯಲಪ್ಪ ಪೂಜಾರಿ, ಶಿವಾನಂದ ಶಿವಗದ್ದಗಿ, ಬೇಬಿ ರಾಠೋಡ, ಚಿಮಾಜ್ಜಿ ಥೋರಾತ, ಸಿದ್ದು ಬೇಡರ, ರಾಜಕುಮಾರ ಜಾಧವ, ರೇವಣಸಿದ್ದ ಕುಂಬಾರ , ವಜೀರ್ ಪಟೇಲ , ಶಿವಪುತ್ರ ಬೆನಕನಹಳ್ಳಿ , ಹಣಮಂತ ಜಮಾದಾರ, ಶ್ರೀಮಂತ ಕಾಂಬಳೆ ,ರಾಮ ಬಾರಾಣಿ, ಸಿದ್ದು ಬಿರಾದಾರ, ಮಾದೇವ ಅಳಗಿ ಇಂಗಳಗಿ ಹಾಗೂ ಮಾವಿನಹಳ್ಳಿ ಗ್ರಾಮಸ್ಥರು ಭಾಗವಹಿಸಿದ್ದರು.