ರೋಗಿಯ ಉಪಚಾರದಲ್ಲಿ ವೈದ್ಯರ ಪಾತ್ರ ಶ್ರೇಷ್ಠ ಆದರೂ ಶುಶ್ರುಕಿಯ ಪಾತ್ರವೂ ಮಹತ್ವದ್ದು ಎಂದು ಕಂದಾಯ ಉಪವಿಭಾಗ ಅಧಿಕಾರಿ ಅಬೀದ ಗದ್ಯಾಳ ಹೇಳಿದರು.
ಪಟ್ಟಣದ ಎಸ್ ಎಸ್ ಪ್ಯಾರಾ ಮೆಡಿಕಲ್ ಕಾಲೇಜ್ ಹಾಗೂ ಎಕ್ಸಲೆಂಟ್ ಆಂಗ್ಲ ಮಾದ್ಯಮ ಪ್ರಾಥಮಿಕ ಶಾಲೆಯ ಸಂಯುಕ್ತಾಶ್ರಯದಲ್ಲಿ ಜರುಗಿದ ೨ ನೇ ವಾರ್ಷಿಕೋತ್ಸವ ವೈಭವ ಸಿರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಾಮಾನ್ಯವಾಗಿ, ಒಬ್ಬ ವ್ಯಕ್ತಿಯು ವಾಸಿಸುವ ಸಂದರ್ಭವು ಅವನ ಆರೋಗ್ಯ ಸ್ಥಿತಿ ಮತ್ತು ಜೀವನದ ಗುಣಮಟ್ಟ ಎರಡಕ್ಕೂ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಆರೋಗ್ಯದ ಮುಖ್ಯ ನಿರ್ಣಾಯಕ ಅಂಶಗಳಲ್ಲಿ ನರ್ಸಿಂಗದವರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಶಿಕ್ಷಕ, ಸಾಹಿತಿ ದಶರಥ ಕೋರಿ , ಸಂಸ್ಥೆಯ ಅಧ್ಯಕ್ಷ, ನ್ಯಾಯವಾದಿ ಎಸ್ ಬಿ ಕೆಂಬೋಗಿ ಮಾತನಾಡಿದರು.
ದಿವ್ಯ ಸಾನಿಧ್ಯವಹಿಸಿದ ಗೋಳಸಾರದ ಅಭಿನವ ಪುಂಡಲಿAಗ ಪರಮ ಪೂಜ್ಯರು, ವಕೀಲರ ಸಂಘದ ಅಧ್ಯಕ್ಷ ಪಿ.ಬಿ ಪಾಟೀಲ, ಅಬಕಾರಿ ನಿರೀಕ್ಷಿಕ ದೌಲತರಾಯ್ ಬಿ, ಪುರಸಭೆ ಮಾಜಿ ಅಧ್ಯಕ್ಷ ಯಮುನಾಜಿ ಸಾಳುಂಕೆ, ಪಾಪು ಕಿತ್ತಲಿ ಸೇರಿ ವಿವಿಧ ಕ್ಷೇತ್ರದ ಸಾಧಕರಾದ ಶ್ರೀ ಖಾಜು ಸಿಂಗೆಗೊಳ, ಪ್ರೀತು ದಶವಂತ, ಮಲ್ಲು ಗುಡ್ಲ, ಮುಬಾರಕ್ ಇಂಡಿಕರ, ಡಾ. ಸುನೀಲಕುಮಾರ್ ಸರಸಂಬಿ ಅವರನ್ನು ಸನ್ಮಾನಿಸಿ ಗೌರವಿಸಿದರು.
ರಮಾಬಾಯಿ ಪ್ರೌಢಶಾಲಾ ಮುಖ್ಯ ಗುರುಗಳು ನಿಜಣ್ಣ ಕಾಳೆ, ಪುರಸಭೆ ಸದಸ್ಯ ದೇವೆಂದ್ರ ಕುಂಬಾರ, ಮುಸ್ತಾಕ ಇಂಡಿಕರ, ಅನೀಲಗೌಡ ಬಿರಾದಾರ, ಹುಚ್ಚಪ್ಪ ತಳವಾರ, ಸಂಗಮೇಶ ಬಿರಾದಾರ, ಮಲ್ಲಿಕಾರ್ಜುನ ವಾಲಿಕಾರ, ಮಲ್ಲಿಕಾರ್ಜುನ ಹಾವಿನಾಳಮಠ, ಡಾ. ರಮೇಶ್ ರಾಠೋಡ, ಮೋಹನ ರಾಠೋಡ ಮತ್ತಿತರಿದ್ದರು.