ಇಂಡಿ : ಸ್ವತಂತ್ರ ಮೊದಲ ಸೇನಾನಿ ಟಿಪ್ಪು ಸುಲ್ತಾನ್, ಅದಲ್ಲದೇ ಟಿಪ್ಪು ಸುಲ್ತಾನ್ ಜಾತ್ಯತೀತ ವ್ಯಕ್ತಿ, ಸ್ವಾತಂತ್ರ್ಯಕ್ಕೆ ಹೋರಾಡಿ ಮೈಸೂರಿನ ಹುಲಿ ಎಂದು ಖ್ಯಾತಿ ಪಡೆದಿದ್ದಾರೆ ಎಂದು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಜಾವೀದ್ ಮೋಮಿನ್ ಮಾತನಾಡಿದರು.
ರವಿವಾರ ಪಟ್ಟಣದ ಟಿಪ್ಪು ಸುಲ್ತಾನ್ ವೃತ್ ದಲ್ಲಿ ಯೂಥ್ ಕವರೇಜ್ ಅಸೋಸಿಯೇಷನ್ ಆಶ್ರಯದಲ್ಲಿ ಜರುಗಿದ ಟಿಪ್ಪು ಸುಲ್ತಾನ್ 274 ನೇ ಜಯಂತಿ ಅಂಗವಾಗಿ ಏರ್ಪಡಿಸಿರುವ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಅವರನ್ನು ಒಂದು ಧರ್ಮದ ಆಧಾರದ ಮೇಲೆ ನೋಡಿ ತಾರತಮ್ಯ ಮಾಡಬಾರದು. ಏನೇ ಭಿನ್ನಾಭಿಪ್ರಾಯಗಳಿದ್ದರೂ ಬದಿಗೊತ್ತಿ ವ್ಯಕ್ತಿತ್ವ, ಅವರ ತ್ಯಾಗ ಬಲಿದಾನ ವನ್ನು ಸ್ಮರಿಸಬೇಕಿದೆ. ಟಿಪ್ಪು ಸುಲ್ತಾನ್ ದೇಶಕ್ಕಾಗಿ ತನ್ನ ಮಕ್ಕಳನ್ನು ಬ್ರೀಟಿಷರಲ್ಲಿ ಒತ್ತೆ ಇಟ್ಟು ಹೋರಾಡಿದ ವೀರ. ಅಂತಹ ವೀರ ಸೇನಾನಿಯ ಜಯಂತಿಯನ್ನು ಮಾಡಬೇಕಾದದ್ದು ಸರ್ಕಾರದ ಕರ್ತವ್ಯ. ಆದರೆ, ಕೋಮುವಾದಿ ಬಿಜೆಪಿ ಸರ್ಕಾರ ಟಿಪ್ಪು ಸುಲ್ತಾನ್‍ನ ದೇಶಭಕ್ತಿಯನ್ನು ಮರೆಮಾಚಲು ಪ್ರಯತ್ನಿಸುತ್ತಿರುವುದು ಖಂಡನೀಯ. ಟಿಪ್ಪು ಸುಲ್ತಾನ್ ಸೌಹಾರ್ದ ಆಡಳಿತ, ಶೂರತನ ಎಂದಿಗೂ ಅಮರ ಎಂದು ಹೇಳಿದರು.
ಇನ್ನೂ ಶಾಂತಿ ಸಮಾಜ ಸೇವಾ ಸಂಘದ ಅಧ್ಯಕ್ಷ ಅಯೂಬ್ ನಾಟೀಕಾರ ಮಾತನಾಡಿ, ನಮ್ಮೆಲ್ಲರಿಗೂ ಅತೀ ಹೆಮ್ಮೆಯ ವಿಚಾರ ಅಂದರೆ ಟಿಪ್ಪು ಸುಲ್ತಾನ್ ಕರ್ನಾಟಕದವರು, ಕನ್ನಡದವರು. ಆದರೆ, ದೊರೆ ಟಿಪ್ಪುವಿನ ಕೊಡುಗೆ ಕೇವಲ ಕನ್ನಡಕ್ಕೆ ಮತ್ತು ಕರ್ನಾಟಕಕ್ಕೆ ಸೀಮಿತವಲ್ಲ. ಯಾಕೆ ಅಂದರೆ ಬ್ರಿಟಿಷರು ಹೆದರುತ್ತಿದ್ದ ಬೆಚ್ಚಿ ಬೀಳುತ್ತಿದ್ದ ನಮ್ಮ ದೇಶದ ಏಕೈಕ ದೊರೆ ಹಜರತ್ ಟಿಪ್ಪು ಸುಲ್ತಾನ್. ಕನ್ನಡದೇ ನೆಲದಲ್ಲೇ ಹುಟ್ಟಿ ಕನ್ನಡದ ನೆಲದಲ್ಲೇ ತನ್ನ ನೆತ್ತರು ಹರಿಸಿದವರು ಟಿಪ್ಪು ಸುಲ್ತಾನ್. ಬ್ರಿಟಿಷರು ಎಷ್ಟೇ ಕಾಡಿದರೂ ಬೆದರದ ದೊರೆ ಟಿಪ್ಪು ಸುಲ್ತಾನ್ ಎಂದು ಹೇಳಿದರು.
ಇನ್ನೂ ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಮೌಲಾನಾ ಸದ್ದಾಂ ಮಾತನಾಡಿದರು.
ಇನ್ನೂ ಈ ಸಂದರ್ಭದಲ್ಲಿ ಮುಪ್ತಿ ಅಬ್ದುಲ್ ರಹಮಾನ್, ಯೂಥ ಕವರೇಜ ಅಧ್ಯಕ್ಷ ಜಾಕೀರ ಮಲಘಾನ, ಉಪಾಧ್ಯಕ್ಷ ಮೌಲಾನಾ ಸಮೀರ, ಕಾರ್ಯದರ್ಶಿ ಮುಜಮಿಲ್ಲ ಬಾಗವಾನ, ಅಂಜುಮನ ಅಧ್ಯಕ್ಷ ಮುನ್ನಾ ಬಾಗವಾನ , ಪುರಸಭೆ ಸದಸ್ಯ ಸುಧೀರ ಕರಕಟ್ಟಿ, ಅಯೂಬ ಬಾಗವಾನ , ಇಸ್ಮಾಯಿಲ ಅರಬ, ಇಲಿಯಾಸ ಮಾಣಿಕ, ಪತ್ರಕರ್ತ ಫಯಾಜಅಹ್ಮದ ಬಾಗವಾನ , ಫಾರೂಕ ಬಿಸನಾಳ ಶೌಕತ ಖಾಜಿ ,ಏಜಾಜ ಮುನಶಿ, ಮುಜಪರ ಬಾಗವಾನ, ವಶೀಮ ಖಾಜಿ, ನಿಸಾರ ಬಳ್ಳಾರಿ, ದಾವೂದ ಶೇಖ, ಉಪಸ್ಥಿತರಿದ್ದರು.