ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಸದ್ಯಕ್ಕೆ ಶಾಕ್ ಎದುರಾಗಿದೆ. ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳ ಹಣ ಇನ್ನೂ ಕೈ ಸೇರಿಲ್ಲ, ಈ ಕಾರಣದಿಂದ ಫಲಾನುಭವಿಗಳು ಆತಂಕಗೊಂಡಿದ್ದಾರೆ. ಆಹಾರ ಇಲಾಖೆ ಈಗ ಅನಧಿಕೃತ ಬಿಪಿಎಲ್ ಕಾರ್ಡ್ಗಳ ಮೇಲೆ ಕ್ರಮ ಕೈಗೊಂಡಿದ್ದು, ಈ ಕಾರ್ಡ್ ರದ್ದಾದವರಿಗೆ ಗೃಹಲಕ್ಷ್ಮಿ ಯೋಜನೆಯ ಸಹಾಯವಾಗದಿರಬಹುದೇನೋ ಎಂಬ ಆತಂಕ ಮೂಡಿದೆ.
ಆದರೆ, ಇಲಾಖೆಯ ಅಧಿಕಾರಿಗಳ ಸ್ಪಷ್ಟನೆ ಪ್ರಕಾರ, ಬಿಪಿಎಲ್ ಕಾರ್ಡ್ ರದ್ದಾದ ಕೂಡಲೇ ಗೃಹಲಕ್ಷ್ಮಿ ಯೋಜನೆ ರದ್ದುವಾಗುವುದಿಲ್ಲ. ಗೃಹಲಕ್ಷ್ಮಿ ಯೋಜನೆಗಾಗಿ ಬಿಪಿಎಲ್ ಕಾರ್ಡ್ಗಳು ಮಾತ್ರವೇ ಮಾನದಂಡವಾಗಿಲ್ಲ, ಬೇರೆಯಾದ ಮಾನದಂಡಗಳನ್ನು ಹೊಂದಿದೆ. ಇದರಿಂದ ಫಲಾನುಭವಿಗಳಿಗೆ ಆತಂಕ ಪಡುವ ಅಗತ್ಯವಿಲ್ಲ, ಅಕ್ರಮ ಬಿಪಿಎಲ್ ಕಾರ್ಡ್ ಹೊಂದಿದವರೇ ಈ ಬಗ್ಗೆ ಹೆಚ್ಚು ಚಿಂತೆ ಪಡುವಂತಾಗಿದೆ.