ತಾನು ಕೊಟ್ಟ ಸಾಲವನ್ನು ವಾಪಸ್ ಪಡೆಯುವಲ್ಲಿ ವಿಫಲವಾದ ಕಾರಣ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ನಿನ್ನೆ ತಡರಾತ್ರಿ ವಿಜಯಪುರ ಜಿಲ್ಲೆಯ ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆಲಮಟ್ಟಿ ಗ್ರಾಮದ ಶಶಿಕಾಂತ ಸಾಬಣ್ಣ ಬಾಗೇವಾಡಿ ಎಂಬುವವರು ನೇಣಿಗೆ ಶರಣಾಗಿದ್ದಾರೆ.
ಮೃತರು ಸಂತೋಷ ಗುಳಬಾಳ, ರೂಪಾ ಸೇರಿದಂತೆ ನಾಲ್ವರ ಬಳಿ ಸಾಲವನ್ನು ವಾಪಸ್ ಕೇಳಿದಾಗ ಕಿರುಕುಳವನ್ನು ಅನುಭವಿಸಿದ್ದಾಗಿ ಕುಟುಂಬದವರಿಂದ ದೂರಿನಲ್ಲಿ ಹೇಳಲಾಗಿದೆ.