ಇಂಡಿ : ಎಲ್ಲ ಗ್ರಾಮದಲ್ಲಿ ಹೇಗಿದೆಯೋ ನಮಗೆ ಗೊತ್ತಿಲ್ಲ, ಆದ್ರೆ ನಮ್ಮ ಹಂಜಗಿ ಗ್ರಾಮದಲ್ಲಿ ಆ ಜಾತಿ ಇ ಜಾತಿ ಎನ್ನದೆ. ಗ್ರಾಮದವರು ದಲಿತನಾದ ನನ್ನನ್ನು ಊರಿನ ಚೆರ್ಮನ್ ಆಗಿ ಮಾಡಿದರು. ನಮ್ಮ ಗ್ರಾಮದಲ್ಲಿ ದಲಿತರು, ಮುಸಲ್ಮಾನರು, ಎಲ್ಲ ವರ್ಗದವರು ಅಣ್ಣ ತಮ್ಮoದಿರ ತರ ಹಿಂದಿನಿಂದಲೂ ಬಂದಿದ್ದೇವೆ. ದಲಿತರಿಗೆ ಅನ್ನ್ಯಾಯ ಆದರೆ ಬರುವುದು ಪೊಲೀಸ್ ಇಲಾಖೆ ಇದು ಯಾಕೆ ಅಂದ್ರೆ ಸಮರಶ್ಯ ಇಲ್ಲ ಅಂದ್ರೆ ಇದು ಉದ್ಭವಿಸುತ್ತದೆ. ಗ್ರಾಮದಲ್ಲಿ ಯಾವುದೇ ಗಲಭೆ ಗಲಾಟೆ ಆದರೂ ದಲಿತರೇ ಬಗೆಹರಿಸುತ್ತಾರೆ ಹೊರತು ಮತ್ತೆ ಯಾರು ಬರುವುದಿಲ್ಲ.ಎಂದು ಮುತ್ತಪ್ಪ ಪೋತೆ ಅವರು ಮಾತನಾಡಿದರು. ಎಸ್ ಸಿ.ಎಸ್ ಟಿ ಅಂತ ಬಂದ್ರೆ ಬಸ್ಸಸ್ಟಾಂಡ್ ಮತ್ತು ಕಟಿಂಗ್ ಶಾಪ್, ದೇವಸ್ಥಾನ, ಕುಡಿಯುವ ನೀರು,ಕೆರೆ ಅಥವಾ ಭಾವಿ ಗಳಾಗಿರಬಹುದು ಇ ಸಾರ್ವಜನಿಕ ಸ್ಥಳಗಳಲ್ಲಿ ಮೇಲ್ಜಾತಿಯಾವರು ಕೇಳ ಜಾತಿಯವರಿಗೆ ಕಡೆಗಣಿಸುವ ಕೆಲಸ ಹಿಂದೆ, ಮತ್ತು ಬೇರೆ ಬೇರೆ ಸ್ಥಳದಲ್ಲಿ ನಡೀತಾ ಇದೆ. ಆದ್ರೆ ನಿಮ್ಮ ಊರಿನ ಸಾಮರಸ್ಯ ನೋಡಿದರೆ ತುಂಬಾ ಖುಷಿಯಾಗುತ್ತೆ. ನಿಮ್ಮ ಊರಿನ ಎಸ್ ಸಿ . ಎಸ್ ಟಿ ಕುಂದು ಕೊರತೆಯ ಬಗ್ಗೆ ಏನೆ ತೊಂದರೆಗಳಿದ್ದರು. ನಮ್ಮ ಪೊಲೀಸ್ ಇಲಾಖೆಗೆ ಶಾಪರ್ಕಿಸಿ ಎಂದು ಗ್ರಾಮೀಣ ಪೊಲೀಸ್ ಠಾಣಾ ಪಿಎಸ್ಐ ಅಶೋಕ ನಾಯಕ ಅವರು ಮಾತನಾಡಿದರು. ಮುತ್ತಪ್ಪ ಫೋತೆ, ಶಿವಾನಂದ ಹಂಜಗಿ, ಮಲಕಪ್ಪ ತಡಲಗಿ,ಹನುಮಂತ ಕಂಟಿಕಾರ. ಮಸ್ತಾನ ಪಾಂಡು.ಇನ್ನು ಅನೇಕ ಊರಿನ ಜನ ಉಪಸ್ಥಿತರಿದ್ದರು.