ವಿಜಯಪುರ ನಗರದ ಆರ್.ಕೆ.ಎಮ್ ಆಸ್ಪತ್ರೆಯಲ್ಲಿ ಮಹೇಂದ್ರಕುಮಾರ ನಾಯಕ್ ಜನ್ಮದಿನದ ಅಂಗವಾಗಿ ಮಹೇಂದ್ರಕುಮಾರ ನಾಯಕ್ ಫೌಂಡೇಶನ್ ವತಿಯಿಂದ ರಕ್ತದಾನ ಶಿಬಿರ ಜುಲೈ 20 ರಂದು ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಬರುವ ಜುಲೈ 20 ರಂದು ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಆರ್.ಕೆ.ಎಂ. ಆಸ್ಪತ್ರೆ ಮುಖ್ಯಸ್ಥ ಡಾ.ಶಂಭುಲಿಂಗ ಕರ್ಪೂರಮಠ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯಪುರದಲ್ಲಿ ಈ ಬೃಹತ್ ಪ್ರಮಾಣದ ರಕ್ತದಾನ ಶಿಬಿರ ಸಂಘಟನೆಗೆ ಸಕಲ ಸಿದ್ದತೆ ಕೈಗೊಳ್ಳಲಾಗುತ್ತಿದೆ. ರಾಷ್ಟ್ರೋತ್ಥಾನ ಬ್ಲಡ್ ಬ್ಯಾಂಕ್, ವಿಜಯಪುರ ಬ್ಲಡ್ ಬ್ಯಾಂಕ್, ಶಿವಗಿರಿ ಬ್ಯಾಂಕ್ ಹಾಗೂ ಶ್ರೀ ಸಿದ್ದೇಶ್ವರ ಬ್ಲಡ್ ಬ್ಯಾಂಕ್ ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಸುಮಾರು 800 ಕ್ಕೂ ಹೆಚ್ಚು ಜನರು ಈ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಲಿದ್ದಾರೆ ಎಂದರು.
ರಕ್ತದಾನ ಮಾಡುವುದರಿಂದ ಆಗುವ ಪ್ರಯೋಜನಗಳು ಸಾಕಷ್ಟಿವೆ, ರಕ್ತದಾನದಿಂದ ಮೂರು ಜೀವಗಳಿಗೂ ಉಳಿಸುವ ಪುಣ್ಯ ಪ್ರಾಪ್ತಿಯಾಗಲಿದೆ.
ಈ ಅರ್ಥಪೂರ್ಣ ಕಾರ್ಯಕ್ಕೆ ಮಹೀಂದ್ರಕುಮಾರ ನಾಯಕ್ ಅವರ ಅಭಿಮಾನಿಗಳು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಶಿಬಿರದಲ್ಲಿ ಯಶಸ್ವಿಗೆ ಸಂಕಲ್ಪ ಮಾಡಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಅರಣ್ಯ ಪ್ರಮಾಣ ಕಡಿಮೆ ಇದೆ ಹೀಗಾಗಿ ಸಸಿ ವಿತರಿಸುವ ಕಾರ್ಯಕ್ರಮ ಸಹ ಇದೇ ಸಂದರ್ಭದಲ್ಲಿ ನಡೆಯಲಿದೆ ಎಂದರು.
ಯುವಜನತೆ ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಕೋರಿದರು.
ವರದಿ: ಲಾಲಸಾಬ ಸವಾರಗೋಳ I Today News ವಿಜಯಪುರ