ಪ್ರತಿದಿನ ಹೊಸ ಹೊಸ ಸಂಗತಿಗಳನ್ನು ಪ್ರಸಾರಪಡಿಸುವ ವರದಿಗಾರರು ಸಾರ್ವಜನಿಕ ಶಿಕ್ಷಕರು ಎಂದು ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಶ್ರೀಗಳು ನುಡಿದರು. ನಗರದ ಕಂದಗಲ್ ಹನಮಂತರಾಯ ರಂಗಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರರ್ಕರ ಸಂಘ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚಾರಣೆ ಪ್ರತಿಭಾ ಪುರಸ್ಕಾರ, ಸಾಧಕ ಪತ್ರರ್ಕರರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆರ್ಶಿಚನ ನೀಡಿದರು.ಪತ್ರಕರ್ತರು ಹೊಸ ಸಂಗತಿಗಳನ್ನು ಹರಡುವವವರು. ಹೀಗಾಗಿ ಪತ್ರಕರ್ತರು ಸಾರ್ವಜನಿಕ ಶಿಕ್ಷಕರು ಎಂದು ಬಣಿಸಿದರು. ಪತ್ರಿಕೆಗಳಿಗೆ ಎರಡು ಮುಖಗಳಿವೆ. ಓದುಗರ ಮನಸ್ಸು ವಿಕಸನಗೊಳಿಸುವ ಒಂದು ಮುಖವಾದರ ಸಮಾಜ ಅಂಕು ಡೊಂಕು, ನಡೆ ನುಡಿ ತಿದ್ದುವ ಇನ್ನೊಂದು ಮುಖವಿದೆ. ಯಾವ ಮುಖವೂ ವಿಮುಖವಾಗಬಾರದು ಎಂದರು.