ಮಳೆಯಿಂದ ಜಲಾವೃತ್ತವಾಗಿದ್ದ ಸೇತುವೆ ಮೇಲ ಪ್ರಯಾಣಿಕರಿದ್ದ ಸರ್ಕಾರಿ ಬಸ್ ಚಲಾಯಿಸಿ ದುಸ್ಸಾಹಸ ಮೆರೆದಿದ್ದ ಚಾಲಕ ಹಾಗೂ ನಿರ್ವಾಹಕನನ್ನು ಅಮಾನತು ಮಾಡಿ ಬಾಗಲಕೋಟೆಯ ಕೆಎಸ್ ಆರ್ ಟಿಸಿ ವಿಭಾಗೀಯ ನಿಯಂತ್ರಣ ಅಧಿಕಾರಿ ನೀತಿನ ಹೆಗಡೆ ಆದೇಶ ಹೊರಡಿಸಿದ್ದಾರೆ.
ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯ ಸಾತಿಹಾಳದ ಸೇತುವೆ ಮಳೆಯಿಂದ ಜಲಾವೃತವಾಗಿತ್ತು ಇದನ್ನು ಲೆಕ್ಕಿಸದೇ ಭಾಗಲಕೋಟ ಡೀಪೋದ ಕೆಎಸ್ ಆರ್ ಟಿಸಿ ಬಸ್ ಚಾಲಕ ಪ್ರಯಾಣಿಕರ ಜೀವ ಪಣಕ್ಕೆ ಇಟ್ಟು ಜಲಾವೃತವಾಗಿದ್ದ ಸೇತುವೆ ಮೇಲೆ ಬಸ್ ಚಲಾಯಿಸಿದ್ದನು.
ಈ ಸಂದರ್ಭದಲ್ಲಿ ಬಸ್ ಸ್ವಲ್ಪ ವಾಲಿದ್ದ ಕಾರಣ ಬಸ್ ನಲ್ಲಿ ಪ್ರಯಾಣಿಕರು ಗಾಬರಿಯಾಗಿದ್ದರು ಮತ್ತೊಂದು ದಡದಲ್ಲಿದ್ದ ಗ್ರಾಮಸ್ಥರು ಸಹ ಸೇತುವೆ ಮೇಲೆ ಬರಬೇಡ ಎಂದು ಚೀರಾಡಿದ್ದರೂ ಸಹ ಅದನ್ನು ಲೆಕ್ಕಿಸದೇ ಚಾಲಕ ಬಸ್ ತೆಗೆದುಕೊಂಡು ಅಪಾಯದಲ್ಲಿ ಬಸ್ ಚಲಾಯಿಸಿದ್ದನು ಈ ಕುರಿತು ಮಾದ್ಯಮಗಳಲ್ಲಿ ಬಸ್ ಚಾಲನೆ ವಿಡಿಯೋ ಸಮೇತ ಸುದ್ದಿ ಪ್ರಕಟಿಸಿದ್ದವು. ಇದರಿಂದ ಎಚ್ಚತ್ತ ಬಾಗಲಕೋಟೆಯ ಕೆ ಎಸ್ ಆರ್ ಟಿ ಸಿ ವಿಭಾಗೀ ನಿಯಂತ್ರಣಾಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬಸ್ ಚಾಲಕ ಎಂ ಎಂ ಪತ್ತಾರ ಹಾಗೂ ನಿರ್ವಾಹಕ ಆರ ಎಂ ಕುಲಕರ್ಣಿ ಅವರನ್ನು ಅಮಾನತು ಗೊಳಿಸಿ ಆದೇಶಿಸಿದ್ದಾರೆ.