ಇಂಡಿ: ವಿದ್ಯಾರ್ಥಿಗಳೇ ದೇವರು, ವಿದ್ಯಾಲಯವೇ ದೇವಾಲಯ ಎಂಬ ಮಂತ್ರ ಪಠಣದೊಂದಿಗೆ ಭಕ್ತರು ಕೊಟ್ಟ ಕಾಣಿಕೆಯಲ್ಲೇ ಬಡ ಮಕ್ಕಳ ಅಕ್ಷರ ದಾಹ ನೀಗಿಸಿದ ಸಂತ ಬಂಥನಾಳದ ಸಂಗನಬಸವ ಮಹಾಶಿವಯೋಗಿಗಳು. ಅವರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾಳಜಿಯೊಂದಿಗೆ ಪರಿಶ್ರಮ ಪಟ್ಟವರು ಎಂದು ನಿವೃತ್ತ ಪ್ರಾಚಾರ್ಯರಾದ ಡಾ.ವಿ ಡಿ ಐಹೊಳ್ಳಿ ಹೇಳಿದರು.
ಅವರು ಇಂದು ಇಂಡಿ ಪಟ್ಟಣದ ಭೀಮಾಂತರಂಗ ಆನ್ ಲೈನ್ ಸಾಹಿತ್ಯಿಕ-ಸಾಂಸ್ಕೃತಿಕ ಜಗಲಿ ವತಿಯಿಂದ ಜರುಗಿದ “ಬಂಥನಾಳದ ಜ್ಯೋತಿ ಶ್ರೀ ಸಂಗನಬಸವ ಶಿವಯೋಗಿಗಳು “ಕುರಿತು ಆನ್ ಲೈನ್ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಬಾಲ್ಯದಲ್ಲಿಯೇ ಅಪೂರ್ವ ತೇಜಸ್ಸು, ಹಸನ್ಮುಖತೆಯನ್ನು ಮೈಗೂಡಿಸಿಕೊಂಡು ಬೆಳೆದ ಶ್ರೀಗಳು, ಶೈಕ್ಷಣಿಕ ಕ್ರಾಂತಿಗೈಯುತ್ತಾ ಭಾವೈಕ್ಯತೆಯ ಹರಿಕಾರರಾಗಿದ್ದರು ಹಾಗೆಯೇ ಅವರ ಜೋಳಿಗೆ ಜ್ಯೋತಿ ಹೊಂದಿತ್ತು. ಇಂದು ಜಗಜ್ಯೋತಿ ಆಗಿದೆ ಎಂದು ಅಭಿಪ್ರಾಯಪಟ್ಟರು.
ಬಂಥನಾಳದ ಡಾ.ವೃಷಭಲಿಂಗೇಶ್ವರ ಶಿವಯೋಗಿಗಳು ದಿವ್ಯ ಸಾನಿಧ್ಯ ವಹಿಸಿದ್ದರು.
ಸಂಶೋಧಕರಾದ ಡಿ ಎನ್ ಅಕ್ಕಿ,ಡಾ ಎಸ್ ಕೆ ಕೊಪ್ಪ, ಸಂತೋಷ ಬಂಡೆ, ಬಸವರಾಜ ಕಿರಣಗಿ, ವ್ಹಿ ಆರ್ ದಸ್ತರೆಡ್ಡಿ, ಪುಂಡಲೀಕ ಸಣ್ಣಾರ, ಶ್ರೀಧರ ಹಿಪ್ಪರಗಿ,ಈರಣ್ಣ ಕಂಬಾರ, ದತ್ತಾತ್ರೇಯ ಕುಲಕರ್ಣಿ, ಡಾ.ಮಾಧವ ಗುಡಿ, ನಿಂಗಮ್ಮ ಗೇರಡೆ, ರವಿಕುಮಾರ ಅರಳಿ, ಸರೋಜಿನಿ ಮಾವಿನಮರ,
ಲಕ್ಷ್ಮಣ ಝಳಕಿ, ರಾಚು ಕೊಪ್ಪ, ಡಾ. ರಾಜಶ್ರೀ ಮಾರನೂರ, ಸಿದ್ರಾಮಪ್ಪ ಮಾರನೂರ ಸೇರಿದಂತೆ ಸಾಹಿತಿಗಳು,
ಸಾಹಿತ್ಯಾಸಕ್ತರು ಭಾಗವಹಿಸಿದ್ದರು.
ಸಾಹಿತಿ ರಾಘವೇಂದ್ರ ಕುಲಕರ್ಣಿ ಸ್ವಾಗತಿಸಿದರು, ಸಾಹಿತಿ ಸಿ ಎಂ ಬಂಡಗರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ಗೀತಯೋಗಿ ಅವರು ಸಮಾರೋಪ ಭಾಷಣ ಮಾಡಿದರು.ವೈ ಜಿ ಬಿರಾದಾರ ನಿರೂಪಿಸಿದರು.