ಇಂಡಿ : ಡಾ ಬಾಬಾಸಾಹೇಬ್ ಅಂಬೇಡ್ಕರ ರವರ ೬೬ನೆಯ ಮಹಾಪರಿನಿರ್ವಾಣ ದಿನದಂದು ಜೆಡಿಎಸ್ ತಾಲೂಕಾ ಅಧ್ಯಕರಾದ ಬಿ ಡಿ ಪಾಟೀಲ ನೇತ್ರತ್ವದಲ್ಲಿ,ಇಂಡಿ ನಗರದ ಡಾ ಬಾಬಾಸಾಹೇಬ ಅಂಬೇಡ್ಕರ ಪ್ರತಿಮೆಗೆ ಮಾಲಾರ್ಪಣೆ ಮಾಡಿ .ಬಿ.ಡಿ.ಪಾಟೀಲ ಮಾತನಾಡುತ್ತಾ ೬೬ನೆಯ ಮಹಾಪರಿ ನಿರ್ವಾಣದ ಅಂಗವಾಗಿ ಇಂದು ಅವರ ಸಾಮಾಜಿಕ ಚಿಂತನೆಗಳು ಕೋಟ್ಯಾಂತರ ಶೋಷಿತ ಜನಾಂಕಗಕ್ಕೆ ದಾರಿದೀಪ ವಾಗಿವೆ .ಬುದ್ದ, ಬಸವರ,ರಚಿಂತನೆಗಳು ಪ್ರಸುತ್ತ ಸಂವಿದಾನದಲ್ಲಿ ಅಳವಡಿಸಿ ಸರ್ವರಿಗೂ ಸಮಪಾಲು,ಸಮಬಾಳು,ನೀಡಿದ ಯುಗಪುರುಷರಾಗಿದ್ದಾರೆ.ಅವರ ಚಿಂತನೆಗಳು,ಕನಸ್ಸುಗಳು ಆಳುವ ಸರಕಾರಗಳು ಅಳವಡಿಸಿಕೊಳ್ಳಬೇಕು ಎಂದು ಮಾತನಾಡಿದರು.ತಾಲೂಕಾ ಪ್ರಧಾನಕಾರ್ಯದರ್ಶಿ ಶ್ರೀಶೈಲಗೌಡ ಪಾಟೀಲರುಮಾತನಾಡುತ್ತಾ ಬುದ್ದ ಹಾಗು ಬಸವಣ್ಣನವರ ಪರಿಕಲ್ಪಪನೆಯನ್ನು ಡಾ ಬಾಬಾಸಾಹೇಬ್ ಅಂಬೆಡಕರ್ ರವರು ಸಾಕಾರಗೋಳಿಸಿದ್ದಾರೆ .ಇದೆ ಸಂದರ್ಭದಲ್ಲಿ ಶಿವುಕುಮಾರ ತೆನ್ನಿಹಳ್ಳಿ,ಪರಶುರಾಮ ಪೋಳ, ರಾಜು ಹಾದಿಮನಿ, ಡಾ ರಮೇಶ ರಾಠೋಡ, ಇಸಾಕ ಸೌದಾಗರ, ಐಯಾಜ ಶೇಖ,ಶ್ರಿಶೈಲ ಪೂಜಾರಿ,ಮಲ್ಲು ಬಳಗಾರಿ,ಶಶಿ ಹಾದಿಮನಿ, ಮುಂತಾದರು ಉಪಸ್ಥಿತರಿದ್ದರು.