ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯಲ್ಲಿ ಫುಡ್ ಪಾಯಿಸನ್ ಆಗಿ 43 ಜನ ಅಸ್ವಸ್ಥಗೊಂಡಿದ್ದಾರೆ ಹಾಗೇ 14 ವರ್ಷದ ಬಾಲಕಿ ಮೃತ ಮೃತಪಟ್ಟಿದ್ದಾಳೆ. ಸ್ಥಳೀಯ ರೆಸ್ಟೋರೆಂಟ್ ಒಂದರಲ್ಲಿ ಷಾವರ್ಮಾ ಮತ್ತು ಮುಂದಾದ ಆಹಾರ ಪದಾರ್ಥಗಳನ್ನು ಸೇವಿಸಿದ 12 ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು, ಐದು ಮಕ್ಕಳು ಮತ್ತು ಗರ್ಭಿಣಿ ಮಹಿಳೆ ಸೇರಿದಂತೆ 43 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನಾಮಕ್ಕಲ್ ಜಿಲ್ಲಾಧಿಕಾರಿ ಎಸ್ ಉಮಾ ಮಾಹಿತಿ ನೀಡಿದ್ದಾರೆ.