ಕುಡಿದ ಮತ್ತಿನಲ್ಲಿ ರಸ್ತೆ ಪಕ್ಕದಲ್ಲಿದ್ದ ಕಲ್ಲಿಗೆ ಕಾರು ಗುದ್ದಿ ಐವರ ಪೈಕಿ ಮೂವರು ಸಾವನ್ನಪ್ಪಿದ್ದು, ಇಬ್ಬರು ಬದುಕುಳಿದಿದ್ದಾರೆ. ಈ ಘಟನೆ ಬಸವನಬಾಗೇವಾಡಿ – ಇಂಗಳೇಶ್ವರ ಮಾರ್ಗ ಮಧ್ಯದಲ್ಲಿ ನಡೆದಿದೆ. ಮಲ್ಲು ಡೋಲಗೊಂಡ (32), ಪರಶು ಮಿಣಜಿಗಿ (26) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರೇವಣಸಿದ್ಧ ಶೇಕಣ್ಣಿ (27) ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮೃತರು ಇಂಗಳೇಶ್ವರ ಗ್ರಾಮದವರು ಎಂದು ತಿಳಿದುಬಂದಿದೆ. ಅಪಘಾತದ ವಿಡಿಯೋ ಮತ್ತು ನರಳಾಟದ ಆಡಿಯೋ ಮೊಬೈಲ್ನಲ್ಲಿ ಸೆರೆಯಾಗಿದೆ. ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.