ಪತ್ನಿಯ ಶೀಲ ಶಂಕಿಸಿ ಪತಿ ಹತ್ಯೆ ಮಾಡಿರುವ ಘಟನೆ ತಿಕೋಟ ತಾಲೂಕಿನ ಹುಬನೂರು ತಾಂಡಾ-2 ರಲ್ಲಿ ನಡೆದಿದೆ. ರೇಷ್ಮಾ ರಾಠೋಡ (25) ಕೊಲೆಯಾದ ಪತ್ನಿ. ಅಶೋಕ ರಾಠೋಡ (33) ಕೊಲೆ ಮಾಡಿದ ಪತಿ. ಪತ್ನಿ ರೇಷ್ಮಾ ಶೀಲಶಂಕಿಸಿ ಪತಿ ಕುಡಿದು ಬಂದು ಮನೆಯಲ್ಲಿ ನಿತ್ಯ ಕಿರುಕುಳ ಕೊಡುತ್ತಿದ್ದ ಎನ್ನಲಾಗುತ್ತಿದೆ. ಗಂಡನ ಕಾಟ ತಾಳಲಾರದೆ ರೇಷ್ಮಾ ಹುಬನೂರಿನಲ್ಲಿದ್ದ ತನ್ನ ತವರು ಮನೆಗೆ ಹೋಗಿದ್ದಳು. ಪಾಪಿ ಪತಿ ರೇಷ್ಮಾ ತವರು ಮನೆಗೆ ಹೋಗಿ ಅಲ್ಲಿ ಹೊಡೆದು ಕೊಲೆ ಮಾಡಿದ್ದಾನೆ.