ಇಂದು ದಿನಾಂಕ 10.10.2023 ಸಾಯಂಕಾಲ 6:00 ಸಮಯದಲ್ಲಿ ಇಂಡಿ ಪಟ್ಟಣದಲ್ಲಿನ ಪಟಾಕಿ ವ್ಯಾಪಾರಸ್ಥರ ಸಭೆಯನ್ನು ಇಂಡಿ ಶಹರ ಪೊಲೀಸ್ ಠಾಣೆಯ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು ಸದರಿ ಸಭೆಯಲ್ಲಿ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಹಾಗೂ ಪುರಸಭೆಯ ಅಧಿಕಾರಿಗಳು ಹಾಗೂ ಪುರಸಭೆಯ ಕೆಲವೊಂದು ಸದಸ್ಯರು ಹಾಜರಾಗಿದ್ದರು. ಈ ಸಭೆಯ ಅಧ್ಯಕ್ಷತೆಯನ್ನು ಇಂಡಿ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಾದ ಮಾನ್ಯ ಶ್ರೀ ರತನ್ ಕುಮಾರ್ ಜೀರಗ್ಯಾಳ ರವರು ವಹಿಸಿದ್ದರು. ಸದರಿ ಸಭೆಯಲ್ಲಿ ಪಿಐ ಸಾಹೇಬರು ಪಟಾಕಿ ಸಿಡಿಮದ್ದುಗಳ ಸಂಗ್ರಹಣೆ ಹಾಗೂ ಮಾರಾಟದ ಸಂದರ್ಭಗಳಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ವಿವರವಾಗಿ ಮಾಹಿತಿಯನ್ನು ಪಟ್ಟಣದ ಪಟಾಕಿ ಮಾರಾಟಗಾರರಿಗೆ ತಿಳಿಸಿದರು.
ಅಗ್ನಿಶಾಮಕ ಅಧಿಕಾರಿಗಳಾದ ಶ್ರೀ ತೇಲಿ ರವರು ಮಾತನಾಡುತ್ತಾ ಪಟಾಕಿ ಮಾರಾಟ ಮಾಡುವ ಸಂದರ್ಭದಲ್ಲಿ ಪಟಾಕಿ ಮಾರಾಟಗಾರರು ತಮ್ಮ ಅಂಗಡಿಗಳನ್ನು ಪ್ರಾರಂಭಿಸುವ ಮೊದಲು ಮಾನ್ಯ ಜಿಲ್ಲಾಧಿಕಾರಿಗಳು ವಿಜಯಪುರ ರವರಿಂದ ಅನುಮತಿ ಪಡೆದುಕೊಳ್ಳುವುದು ಹಾಗೂ ಅಂಗಡಿಗಳನ್ನು ನಿಗದಿಪಡಿಸಿದ ಸ್ಥಳದಲ್ಲಿಯೇ ಅಂಗಡಿಯಿಂದ ಅಂಗಡಿಗೆ ಸುಮಾರು ಆರು ಮೀಟರ್ ಗಳ ಅಂತರವನ್ನು ಕಾಯ್ದುಕೊಂಡು ಅಗ್ನಿ ದುರಂತ ಸಂಭವಿಸಿದಂತೆ ನೀರಿನ ಸೌಲಭ್ಯ, ಮರಳು ಮತ್ತು ಅಗ್ನಿ ನಂದಿಸುವ ಉಪಕರಣಗಳು ವಿದ್ಯುತ್ ತಂತಿ ಇರದ ಸ್ಥಳವನ್ನು ಆಯ್ಕೆ ಮಾಡಿಕೊಂಡು ಮಾರಾಟಗಾರರು ತಮ್ಮ ವ್ಯಾಪಾರವನ್ನು ಮಾಡಲು ಸೂಕ್ತ ನಿರ್ದೇಶನಗಳನ್ನು ನೀಡಿರುತ್ತಾರೆ. ಸದರಿ ಸಭೆಯಲ್ಲಿ ಪುರಸಭೆಯ ಸದಸ್ಯರಾದ ಶ್ರೀ ಅನಿಲ್ ಗೌಡ ಬಿರಾದಾರ್ ಸತೀಶ್ ಕುಂಬಾರ್ ಉದ್ಯಮಿಗಳಾದ ಸಂಜೀವ್ ದಶವಂತ ಅಜೀತ ಧನಶೆಟ್ಟಿ ವಿದ್ಯಾಸಾಗರ ಧನಶೆಟ್ಟಿ ಮತ್ತಿತರು ಹಾಜರಿದ್ದರು.