ಸರಿಯಾದ ಸಮಯಕ್ಕೆ ಊಟ ಸಿಗದೆ ಹಾಗೂ ಯಾವುದೋ ಕಾಯಿಲೆಯಿಂದ ಅಪರಿಚಿತ ವ್ಯಕ್ತಿ ಅಸುನೀಗಿರುವ ಘಟನೆ ವಿಜಯಪುರ ನಗರದ ರಾಣಿ ಚೆನ್ನಮ್ಮರಂಗಮಂದಿರದ ಬಳಿ ಮಂಗಳವಾರ ನಡೆದಿದೆ.ಸುಮಾರು 40-45 ವಯಸ್ಸಿನ ಅಪರಿಚಿತ ವ್ಯಕ್ತಿ ಮೃತಪಟ್ಟಿರುವ ದುರ್ದೈವಿ. ಇನ್ನು ರಂಗಮಂದಿರದ ಬಳಿ ಕಳೆದ ಹಲವು ದಿನಗಳಿಂದ ನೆಲೆಸುತ್ತಿದ್ದರು.ಆದ್ರೆ, ಅನಾರೋಗ್ಯ ನಿಮಿತ್ತ ಮೃತಪಟ್ಟಿದ್ದಾರೆ. ಅದಕ್ಕಾಗಿ ಕುಟುಂಬಸ್ಥರು ಹಾಗೂ ವಾರಸುದಾರರು ಇದ್ರೇ ಠಾಣೆಗೆ ಭೇಟಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ. ಗಾಂಧಿಚೌಕ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.