ಬೀದಿ ದೀಪದ ಕೆಳಗೆ ಓದಿ ದೊಡ್ಡವರೆನಿಸಿಕೊಂಡವರ ಕಥೆಗಳನ್ನು ನಾವು ಸಾಕಷ್ಟು ಕೇಳಿದ್ದೇವೆ. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್ ಆಗಿದೆ. ಕೈಗಾರಿಕೋದ್ಯಮಿ ಹರ್ಷ ಗೋಯೆಂಕಾ ಅವರು ಬೀದಿ ದೀಪದ ಕೆಳಗೆ ಶ್ರದ್ದೆಯಿಂದ ಓದುತ್ತಿರುವ ಹುಡುಗನ ಫೋಟೋವನ್ನು ಟ್ವಿಟ್ ಮಾಡಿದ್ದಾರೆ. ‘ವಿದ್ಯೆ ಇಲ್ಲದ ಮಕ್ಕಳು.. ರೆಕ್ಕೆ ಇಲ್ಲದ ಹಕ್ಕಿಗಳಂತೆ’ ಟ್ವಿಟ್ನಲ್ಲಿ ಬರೆದುಕೊಂಡಿದ್ದಾರೆ. ಈ ಫೋಟೋ ಕಂಡ ನೆಟಿಜೆನ್ಸ್ ಸರಕಾರಗಳು ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ.