ಇಂಡಿಯನ್ ರಿಸರ್ವ್ ಬಟಾಲಿಯನ್ ಕಮಾಂಡೆಂಟ್ ಕಚೇರಿ ಸಭಾಂಗಣದಲ್ಲಿ ವಾಯು ನಿಯಂತ್ರಣ ಮಾಸಾಚರಣೆ ಕಾರ್ಯಕ್ರಮ ಆಚರಿಸಲಾಯಿತು.
ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಮತ್ತು ಕಮಾಂಡೆಂಟ್ ಇಂಡಿಯಾ ರಿಸರ್ವ್ ಬಟಾಲಿಯನ್ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಕಮಾಂಡೆಂಟ್ ಎನ್.ಬಿ. ಮೆಳ್ಳಗಟ್ಟಿ ಅವರು ಮಾತನಾಡಿ, ರಸ್ತೆಯಲ್ಲಿ ವಾಹನಗಳಲ್ಲಿ ಸಂಚರಿಸುವಾಗ ಕಡ್ಡಾಯವಾಗಿ ಪ್ರತಿಯೊಬ್ಬರು ಹೆಮ್ಮೆಟ್ ಧರಿಸಬೇಕು. ಅಪಘಾತಗಳು ಸಂಭವಿಸಿದಾಗ ಹೆಚ್ಚಿನ ಹಾನಿಯನ್ನು ತಪ್ಪಿಸಲು ಹೆಲೆಟ್ ಸಹಾಯಕವಾಗುವುದರಿಂದ ಹೆಲೈಟ್ ಧರಿಸುವ ಮೂಲಕ ಅಮೂಲ್ಯವಾದ ಜೀವನ ರಕ್ಷಣೆ ಮುಂದಾಗಬೇಕು ಎಂದು ಹೇಳಿದರು.
ಹಿರಿಯ ಮೋಟಾರು ವಾಹನ ನಿರೀಕ್ಷಕ ಜಿ.ಆರ್. ಮಂಜುನಾಥ್ ಅವರು ಮಾತನಾಡಿ, ವಾಹನಗಳ ಅತಿ ಹೆಚ್ಚಿನ ಓಡಾಟದಿಂದ ವಾಯು ಮಾಲಿನ್ಯವಿಪರೀತವಾಗಿದ್ದು, ವಾಯು ಮಾಲಿನ್ಯ ನಿಯಂತ್ರಣಕ್ಕೆ ಸಾರ್ವಜನಿಕರೆಲ್ಲರೂ ಸಹಕರಿಸಬೇಕು.ವಾಯು ಮಾಲಿನ್ಯ ನಿಯಂತ್ರಣವನ್ನು ಹತೊಟಿಯಲ್ಲಿಡಲು ಎಲ್ಲ ವಾಹನಗಳಿಗೆ ವಾಯು ಮಾಲಿನ್ಯ ಪ್ರಮಾಣ ಪತ್ರ ಪಡೆಯಬೇಕು.ವಾಹನಗಳು ಚಲಿಸುವಾಗ ರಸ್ತೆ ಬದಿಯಲ್ಲಿ ಚಿಹ್ನೆಗಳ ಕುರಿತು ಸಾರ್ವಜನಿಕರಲ್ಲಿಯೂ ಜಾಗೃತಿ ಅತ್ಯವಶ್ಯಕವಾಗಿದೆ. ಪ್ರತಿಯೊಬ್ಬರು ರಸ್ತೆ ನಿಯಮಗಳನ್ನು ಪಾಲಿಸುವಂತೆ ಅವರು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಡೆಪ್ಯೂಟಿ ಕಮಾಂಡೆಂಟ್ ಪ್ರಸನ್ನ ಕುಮಾರ, ನಂದಕುಮಾರ ಎಸ್, ಸಿಂಗದ,ಶರಣಬಸವ, ಸಹಾಯಕ ಕಮಾಂಡೆಂಟ್ ಶರಣಬಸವ, ಎನ್.ಪಿ. ಯಡಾಲ್, ಸಿ. ಲಕ್ಷಣ, ಆರ್.ಪಿ.ಐ ವಿಜಯ್ ಕಟ್ಟಣ್ಣವರ, ಮಹಾವೀರ ಹಳಿಂಗಳಿ, ಹುಸೇನ ಲಾಲಕೋಟೆ, ಪ್ರಕಾಶ ಹುಳಬತ್ತಿ,ಡಿ.ಬಿ.ನಾಗರಾಜ, ವಿಜಯಕುಮಾರ ರೂಡಗಿ ಸೇರಿದಂತೆ ಇತರೆ ನೌಕರರು, ಸಿಬ್ಬಂದಿಗಳು ಉಪಸ್ಥಿತರಿದ್ದರು.