ಇಂಡಿ.ಜೆಡಿಎಸ್ ಅಭ್ಯರ್ಥಿ ಬಿ ಡಿ ಪಾಟೀಲರ 51ನೆಯ ಜನ್ಮದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಲಾಗಿದೆ ಅಂದು ರಕ್ತದಾನ ಶಿಬಿರ,ಬಡರೋಗಿಗಳಿಗೆ ಹಣ್ಣ ಹಂಪಲುಗಳನ್ನು ಹಂಚುವುದು,ಸಶಿ ನಡೆಸುವುದು ಮುಂತಾದ ಸಾಮಾಜಿಕ ಚಟುವಟಿಕೆಗಳನ್ನು ನಡೆಸಲು ಸಭೆ ನಿರ್ಧರಿಸಿದ್ದು.ಕಾರ್ಯಕ್ರಮಕ್ಕೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲಕುಮಾರ ಸ್ವಾಮಿಯವರು ಆಗಮಿಸಲ್ಲಿದ್ದು.ಹಾಗೂ ಜನವರಿ 15 ರಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಪಂಚರತ್ನ ರಥಯಾತ್ರೆ ಇಂಡಿ ವಿಧಾನ ಸಭಾ ಕ್ಷೇತ್ರದಲ್ಲಿ ಸಂಚರಿಸಲ್ಲಿದ್ದು ಸುಮಾರು ಮತಕ್ಷೇತ್ರದ 30 ಕಿಲೋಮಿಟರ ಸಂಚಾರ ಮಾಡಿ,ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿ ಜನರ ಸಮಸ್ಯೆಗಳ ಅವಲೋಕನ ಮಾಡಿ ಮುಂಬರುವ 2023ರಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಪಂಚರತ್ನ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಕಂಕಣ ಬದ್ಧರಾಗಿರುವದಾಗಿದ್ದೇವೆ ಎಂಬ ಸಂದೇಶವನ್ನು ರಾಜ್ಯದ ಮೂಲೆ ಮೂಲೆಗಳಿಗೆ ಮುಟ್ಟಿಸುವ ಉದ್ದೇಶ ಯಾತ್ರೆಯದ್ದಾಗಿದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಬಿ ಜಿ ಪಾಟೀಲ ಹಲಸಂಗಿ ವಹಿಸಿ ಮಾತನಾಡುತ್ತಾ ಕೃಷ್ಣಾ ಮೇಲ್ದಂಡೆ ಯೋಜನೆ ರೂವಾರಿ ಮಾಜಿ ಪ್ರಧಾನಿ ದೇವೇಗೌಡರ ಋಣ ಇಂಡಿ ತಾಲೂಕಿಗೆ ಇದೆ,ಅವರ ಉತ್ತರ ಕರ್ನಾಟಕದ ಕಾಳಜಿ ಅವಿಸ್ಮರಣೀಯ.ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಪಂಚರತ್ನ ಯಾತ್ರೆಯನ್ನು ಇಂಡಿ ತಾಲೂಕಿನ ಸಮಸ್ತರು ಸ್ವಾಗತಿಸಬೇಕು ಎಂದು ವಿನಂತಿ ಮಾತನಾಡಿದರು.ಜೆಡಿಎಸ್ ಅಭ್ಯರ್ಥಿ ಬಿ ಡಿ ಪಾಟೀಲರು ಮಾತನಾಡುತ್ತಾ ಪಂಚರತ್ನ ಯಾತ್ರೆಯನ್ನು ಮತಕ್ಷೇತ್ರದಲ್ಲಿ ಸಂಚರಿಸಿ ಮುಂಬರುವ 2023ರ ಜೆಡಿಎಸ್ ಸರ್ಕಾರ ರಚನೆ ಆದರೆ ಎಲ್ಲಾ ಕಾರ್ಯಗಳನ್ನು ಅನುಷ್ಠಾನಕ್ಕೆ ಸಂಕಲ್ಪ ಮಾಡಿದ್ದಾರೆ.ಈ ಕಾರ್ಯಕ್ರಮದಲ್ಲಿ ತಾಲೂಕಿನ ಸಮಸ್ಥ ರೈತರು ಸಾಲ ಮನ್ನಾದ ರೋವಾರಿಗೆ ಸ್ವಾಗತ ನೀಡಬೇಕು ಎಂದು ವಿನಂತಿ ಮಾಡಿದರು.ಜೆಡಿಎಸ್ ಮುಖಂಡರಾದ ಅಯೂಬ್ ನಾಟೀಕರ, ವಿಜಯಕುಮಾರ್ ಬೋಸಲೆ, ನಾಗೇಶ ತಳಕೇರಿ, ಶ್ರೀಶೈಲಗೌಡ ಪಾಟೀಲ,ಟಿ ಎಸ್ ಪೂಜಾರಿ .ಡಿ ಎಚ್ ರಾಠೋಡ,ಮಾತನಾಡಿದರು.ಇದೆ ಸಂದರ್ಭದಲ್ಲಿ ಗೋವಿಂದ ಚೌವ್ಹಾಣ್, ಸದ್ದಾಂ ಅರಬ್, ಸಿದ್ದು ಡಂಗಾ,ಮಹಿಬೂಬ ಬೇವನೂರ,ಸಾಹೇಬಗೌಡ ಪಾಟೀಲ, ಬಸವರಾಜ ಹಂಜಗಿ,ಬಸಗೋಂಡ ಪಾಟೀಲ, ಸಚಿನ ಕಂಬಾರ,ದುಂಡು ಬಿರಾದಾರ,ಶಾಂತಯ್ಯ ಪತ್ರಿಮಠ ,ಇಸಾಕ ಸೌದಾಗರ,ಮಲ್ಲು ಬೀರನ್ಹಳ್ಳಿ,ಸಿದ್ದಾರಾಮ ಹಳ್ಳೂರ,ಗಡ್ಡೇಪ್ಪ ಮೇತ್ರಿ, ಶ್ರೀಮಂತ ಪೂಜಾರಿ,ಹಣಮಂತ ಹೂನ್ನಳ್ಳಿ,ಶಿವಾ,ಟೆಂಗಳೆ,ಡಾ ರಮೇಶ ರಾಠೋಡ, ಶ್ರೀ ಮತಿ ರೇಖಾ ಶಿಂಗೆ,ಶೋಭಾ ಕಟ್ಟಿ,ಶಿಲ್ಪಾ,ನಾಲ್ಕಮಾನ, ಮುನಸಿ,ಮಾಹಾದೇವ ಮಕಣಾಪೂರ,ಶರಣಗೌಡ ಪಾಟೀಲ, ಶ್ರೀಮಂತ ಪೂಜಾರಿ, ರತ್ನಾಕರ್ ಪರೀಟ,ನಾನಾಗೌಡ ಪಾಟೀಲ,ಗಡ್ಡೇಪ್ಪ ಮೇತ್ರಿ,ಪಿ ಎಮ್ ಮಠ,ರಾಜು ಚೌವ್ಹಾಣ, ಜಯರಾಂ ರಾಠೋಡ,ಶಿವಯೋಗಪ್ಪ ಡೋಮನಾಳ, ನಾರಾಯಣ ವಾಲಿಕಾರ,ಬಾಳು ರಾಠೋಡ,ಬಾಬು ಕಾಂಬಳೆ, ಮುತ್ತು ಹೂಸಮನಿ,ಮಾಹಾದೇವ ನಿಂಗಾರಿ,ಬಾಬು ಮೇತ್ರಿ,ಅಯಾಜ ಶೇಖ್,ಮಾಳು ಪೂಜಾರಿ, ಶಿವಣ್ಣ ಗುಂಜಟಗಿ, ಅಣ್ಣಾರಾಯ ಬಿರಾದಾರ, ಶ್ರೀಕಾಂತ,ಜವೂರ, ವಿಠ್ಠಲ ಹಂಜಗಿ, ಸುದರ್ಶನ ಉಪಾಧ್ಯಾಯ, ಶರಣಪ್ಪ ಹೂಸೂರ, ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.