ಇಂಡಿ ಪುರಸಭೆಯ ಕಾರ್ಯಾಲಯದಲ್ಲಿ ಲಂಚಾವತಾರ ಹೆಚ್ಚಾಗಿದ್ದು ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಕಂದಾಯ ಉಪ ವಿಭಾಗಾಧಿಕಾರಿ ರಾಮಚಂದ್ರ ಗಡದೆ ಅವರಿಗೆ ಮನವಿ ಸಲ್ಲಿಸಿದರು.
ಕರವೇ ಜಿಲ್ಲಾ ಉಪಾಧ್ಯಕ್ಷ ಸುನೀಲಗೌಡ ಬಿರಾದಾರ ಸಾರ್ವಜನಿಕರ ಯಾವುದೇ ಕೆಲಸಕ್ಕೆ ಲಂಚ ಇಲ್ಲದೆ ಕೆಲಸ ಮಾಡುತ್ತಿಲ್ಲಿ ಎನ್۔ ಎ ಉತಾರ ಮುಂತಾದ ಕೆಲಸಗಳಿಗೆ ವಾರಗಟ್ಟಲೆ ತಿರುಗಾಡಿಸುತ್ತಾರೆ. ಅಧಿಕಾರಿಗಳು ಒಬ್ಬರ ಮೇಲೊಬ್ಬರು ಹಾಕುವುದು ದಾಖಲೆ ನೀಡಿದರೂ ಇನ್ನೊಂದು ಕೊಡಿ ಎನ್ನುವುದು ಮಾಮೂಲಿಯಾಗಿದೆ. ಹೀಗೆ ಎಡತಾಕಿಸಿ ಕೊನೆಗೆ ಲಂಚ ನೀಡಿದರೆ ಮಾತ್ರ ಕೆಲಸ ಮಾಡಿಕೊಡುವ ಪದ್ಧತಿ ರೂಢಿಸಿಕೊಂಡಿದ್ದಾರೆ ಎಂದರು.
ನಗರ ಘಟಕದ ಅಧ್ಯಕ್ಷ ಮಹೇಶ ಹೂಗಾರ ಮಾತನಾಡಿ ‘ಪುರಸಭೆ ಸಿಬ್ಬಂದಿ ಕಟ್ಟಡ ಪರವಾನಗಿಗಾಗಿ ಬಂದವರಿಗೆ ಸರಿಯಾದ ಮಾಹಿತಿ ನೀಡುವುದಿಲ್ಲ. ಆವಕ ವಿಭಾಗದಲ್ಲಿ ದಾಖಲೆಗಳನ್ನು ನೀಡದರೂ ಸರಿಯಾಗಿ ದಾಖಲಾತಿ ಮಾಡಿಕೊಳ್ಳುವುದಿಲ್ಲ. ಸರಿಯಾದ ಸಮಯಕ್ಕೆ ಕೆಲಸ ಆಗದ್ದಕ್ಕೆ ಜನರು ಬೇಸತ್ತುಹೋಗಿದ್ದಾರೆ ಈ ಬಗ್ಗೆ ಮುಖ್ಯಾಧಿಕಾರಿ ಅವರ ಗಮನಕ್ಕೆ ತಂದರೆ ಅವರು ಸಹ ಉಡಾಫೆ ಉತ್ತರ ನೀಡುತ್ತಾರೆ ಮೇಲಧಿಕಾರಿಗಳು ಇಲ್ಲಿನ ಸಿಬ್ಬಂದಿಯ ಭ್ರಷ್ಟಾಚಾರದ ಕುರಿತು ತನಿಖೆ ಮಾಡಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಗುರುರಾಜ ಹೊಟಗೊಂಡ, ಸಚಿನ್ ನಾವಿ, ಮಲ್ಲು ಕಂಬಾರ, ಶಿವಕುಮಾರ ಮಡಿವಾಳ, ವಿನಾಯಕ ಕೊರಚಗಾಂವ, ಅಶೋಕ ಪಾಟೀಲ, ನಿಖಿಲ್ ಶಟಿಗಾರ, ಪ್ರಶಾಂತ ಲಾಳಸಂಗಿ, ಶ್ರೀಶೈಲ ಹೂಗಾರ ಇದ್ದರು.