ಕೂಡಗಿ ಗ್ರಾಮದ ಕರ್ನಾಟಕ ಪಬ್ಲಿಕ ಶಾಲೆಯಲ್ಲಿ ಇಂದು ದಿನಾಂಕ 2,7,2022ರಂದು ಶ್ರೀಮತಿ ಕೆ ಬಿ ದಶವಂತ ಗುರುಮಾತೆಯರಿಗೆ ಹಳೆ ವಿದ್ಯಾರ್ಥಿಗಳಿಂದ ಸನ್ಮಾನ ಕಾರ್ಯಕ್ರಮ ವನ್ನು ನೆರೆವರಿಸಲಾಯಿತ್ತು. ಈ ಸಂದರ್ಭದಲ್ಲಿಕೆ ಬಿ ದಶವಂತ ಗುರುಮಾತೆಯರು ತಮ್ಮ ಬದುಕಿನ ವೃತ್ತಿ ಶಿಕ್ಷಣವನ್ನು ನಿವೃತ್ತಿ ಹೊಂದಿದರು.33 ವರ್ಷಗಳ ಕಾಲ ಶಿಕ್ಷಕ ವೃತ್ತಿ ಜೀವನವನ್ನು ಅತ್ಯಂತ ಅಚ್ಚುಕಟ್ಟಾಗಿ, ಎಲ್ಲ ವಿದ್ಯಾರ್ಥಿ ಬಳಗಕ್ಕೂ ತಮ್ಮ ಪ್ರೀತಿ ವಿಶ್ವಾಸ ದಿಂದ. ಶೈಕ್ಷಣಿಕ ಮತ್ತು ದೈಹಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ತಮ್ಮ ವೃತ್ತಿ ಬದುಕಿನಲ್ಲಿ ಸಾವಿರಾರು ವಿದ್ಯಾರ್ಥಿ ಗಳು ಶಿಕ್ಷಣ ಧಾರೆ ಎರದಿದ್ದಾರೆ. ಇಲ್ಲಿ ಕಲಿತ ಕೆಲವು ವಿದ್ಯಾರ್ಥಿ ಗುರುಮಾತೆಯರಿಗೆ ತಮ್ಮ ಮುಂದಿನ ಜೀವನ ಸುಖಕರವಾಗಿರಲಿ ಎಂದು ಬೀಳ್ಕೊಡುಗೆ ಮಾಡಿ ಕಳುಹಿಸಲಾಯಿತು. ಇದೆ ಶಾಲೆಯ ಗುರುಮಾತೆಯರಾದ ಶ್ರೀಮತಿ ಎಸ್ ಕೆ ಬೊಮ್ಮನಹಳ್ಳಿ ಕೂಡಗಿ ಶಾಲೆಯಲ್ಲಿ 16 ವರ್ಷಗಳ ಕಾಲ ಅಕ್ಷರ ಧಾನವನ್ನು ಮಾಡಿ ಅವರು ಹೆಚ್ಚಿನ ಬಡ್ತಿ ಹೊಂದ್ದಿ ಬೆರೆ ಶಾಲೆಗೆ ವರ್ಗಾವಣೆ ಯಾದರು ಅವರಿಗೂ ಸನ್ಮಾನ ವನ್ನು ಮಾಡಿದರು ಈ ಸಂದರ್ಭದಲ್ಲಿ ವಿದ್ಯಾರ್ಥಿ ಜೀವನದಲ್ಲಿ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪ್ರಮುಖ ಪಾತ್ರ ಇರುತ್ತೆ,ಶಿಕ್ಷಕರು ತಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಅರ್ಥ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಾರೆ ,ಶಿಕ್ಷಕರು ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳನ್ನು ಕಲಿಸುತ್ತಾರೆ ಎಂದು ಮಹೇಶಕುಮಾರ ಹರಿಜನ ಅವರು ಮಾತಡಿದರು.
ಈ ಕಾರ್ಯಕ್ರಮದಲ್ಲಿ
ಗ್ರಾಮ ಪಂಚಾಯತ ಸಧ್ಯಸರಾದ ಆರೀಪ ತಾಳಿಕೂಟಿ ,ಅರುಣ ನಾಯಕ ,ಹಾಗೂ ಬಾಬು ವಾಲಿಕಾರ , ವಿಠ್ಠಲ ಮಾದರ ,ಸುರೇಶ ಗಡದಿನ್ನಿ, ಹಾಗೂ ಎಲ್ಲ ವಿದ್ಯಾರ್ಥಿಗಳು ಮತ್ತು ಅಲ್ಲಿ ನೆರದಿದ್ದ ಶಿಕ್ಷಕ ವೃಂದ ದುಃಖ ಸ್ತಬ್ದ ರಾಗಿ ಕಣ್ಣಂಚಲ್ಲಿ ನೀರು ತುಂಬಿಕೊಂಡರು
ಕೂಡಗಿ ಗ್ರಾಮದ ಹಿರಿಯರು ಉಪಸ್ತಿತರಿದ್ದರು.
ಬ್ಯೂರೋ ರಿಪೋರ್ಟ್ :ಲಾಲಸಾಬ ಸವಾರಗೋಳ I Today News ವಿಜಯಪುರ