ಇಂಡಿ: ಆನೇಕಾಲು ರೋಗವು ಸೋಂಕಿತ ಕುಲೆಕ್ಸ್ ಸೊಳ್ಳೆ ಕಚ್ಚುವದರಿಂದ ಹರಡುತ್ತದೆ.ಇದರಿಂದ 6 ರಿಂದ 7 ವರ್ಷಗಳ ನಂತರ ಸೋಂಕಿತ ವ್ಯಕ್ತಿಯ ಕಾಲು ದಪ್ಪವಾಗುತ್ತದೆ.ಈ ರೋಗಕ್ಕೆ ಯಾವದೇ ಚಿಕಿತ್ಸೆ ಲಭ್ಯವಿಲ್ಲದಿರುವದರಿಂದ ಇದನ್ನು ತಡೆಗಟ್ಟಲು 2 ವರ್ಷ ಮೇಲ್ಪಟ್ಟ ಎಲ್ಲರಿಗೂ ವಯಸ್ಸಿಗೆ ಅನುಗುಣವಾಗಿ ಮಾತ್ರೆಗಳನ್ನು ನೀಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಎನ್ ಟಿ ಡಿ ರಾಜ್ಯ ಸಂಯೋಜನಾಧಿಕಾರಿ ಡಾ.ಸಮದಾನ ದೇಬಾಜ್ ಹೇಳಿದರು.
ಅವರು ಇಂದು ಪಟ್ಟಣದ ಶಮ್ಸ್ ಉರ್ದು ಮಾಧ್ಯಮ ಹಾಗೂ ಬಾಲ ಭಾರತಿ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಚೇರಿ ವಿಜಯಪುರ ವತಿಯಿಂದ ಹಮ್ಮಿಕೊಂಡ ಆನೇಕಾಲು ನಿರ್ಮೂಲನೆ ಜಾಗೃತಿ ಕಾರ್ಯಕ್ರಮ ಮತ್ತು ರೋಗ ಪ್ರಸರಣ ಮೌಲ್ಯಮಾಪನ ಸಮೀಕ್ಷೆಯನ್ನು ಉದ್ಘಾಟಿಸಿ ಮಾತನಾಡಿದರು.
0-2 ವರ್ಷದ ಮಕ್ಕಳಿಗೆ ಈ ಮಾತ್ರೆಗಳನ್ನು ನುಂಗಿಸಲಾಗುವದಿಲ್ಲ.ಕಾರಣ ಸೋಂಕಿತ ಕುಲೆಕ್ಸ್ ಸೊಳ್ಳೆ 0-2 ವರ್ಷದ ಮಕ್ಕಳಿಗೆ ಕಚ್ಚಿ 6 ರಿಂದ 7 ವರ್ಷಗಳ ನಂತರ ಫೈಲೇರಿಯ ಹುಳುಗಳ ಇರುವಿಕೆ ಕಂಡುಬರುತ್ತದೆ.ಕಾರಣ ಈ ವಯಸ್ಸಿನ ಮಕ್ಕಳಿಗೆ ಫೈಲೇರಿಯ ಇರುವಿಕೆಯನ್ನು ಟೆಸ್ಟ್ ಕಿಟ್ ಮೂಲಕ ಗುರುತಿಸಲು ಸಾಧ್ಯ. ಫೈಲೇರಿಯ ಜಾಸ್ತಿ ಕಂಡುಬಂದರೆ ಆನೇಕಾಲು ರೋಗ ನಿರ್ಮೂಲನೆ ನಿಮಿತ್ತ ಮಾತ್ರೆಗಳನ್ನು ಇನ್ನು ಹೆಚ್ಚುವರಿ 3 ವರ್ಷ ನೀಡಬೇಕಾಗುತ್ತದೆ ಎಂದು ಹೇಳಿದರು. ಸಂಸ್ಥೆಯ ಅಧ್ಯಕ್ಷ ಸಿಕಂದರ ಬಾದಶಾ ಅರಬ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಜೈಬುನ್ನಿಸಾ ಬೀಳಗಿ,ಡಾ.ಪ್ರಶಾಂತ, ಡಾಟಾ ಸಹಾಯಕ ಸಂತೋಷ ಭೋಸ್ಲೆ, ಶಾಲಾ ಮುಖ್ಯ ಶಿಕ್ಷಕ ಫಯಾಜ್ ಟಾಂಗೆವಾಲ, ಡಿಬಿಬಿಟಿಸಿ ಸಿಬ್ಬಂದಿಗಳು,ಶಾಲಾ ಶಿಕ್ಷಕರು,ಸಮೀಕ್ಷಾ ತಂಡ ಉಪಸ್ಥಿತರಿದ್ದರು.