ವಿಜಯಪುರ ಜಿಲ್ಲಾಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಓ) ಅವರ ನಿರ್ಲಕ್ಷವಹಿಸುತ್ತಿದ್ದ ಕಾರಣ ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಆಕ್ಟಿಐ ಕಾರ್ಯಕರ್ತನಾದ ಅಬ್ದುಲ್ ಹಮೀದ ಇನಾಮದಾರ ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಅವರು ಭ್ರಷ್ಟ ಅಧಿಕಾರಿಯಾದ ದೀಪಾ ಬೆನಕೋಟಿಗೆ ಪಿಡಿಓ ಹಿಕ್ಕನಗುತ್ತಿ ಪಂಚಾಯತಿಯಲಿ ಸಾಕಷ್ಟು ಹಣವನ್ನು ಕೊಳ್ಳೆ ಹೊಡೆದಿರುತ್ತಾರೆ.ಹಾಗೂ ಆ ಪಂಚಾಯಿತಿಯಲ್ಲಿ ಕಡತಗಳು ಮಾಹಿತಿಗಳು ಯಾವುದು ಲಭ್ಯ ಇರುವುದಿಲ್ಲ. ರೈತರಿಗೆ ಅನುಕೂಲವಾಗುವ ರೀತಿ ಕಾಮಗಾರಿಗಳ ವಿಷಯಕ್ಕೆ ಬಂದರೆ ಯಾವುದೇ ರೀತಿ ಗ್ರಾಮ ಸಭೆ ಮಾಡದೇ ಸುಳ್ಳು ಕ್ರಿಯಾ ಯೋಜನೆ ಮೂಲಕ ಹಣ ಕೊಳ್ಳೆ ಹೊಡೆದಿ ರುತ್ತಾರೆ. ಸಾಮಾಜಿಕ ಲೆಕ್ಕ ಪರಿಶೋಧನೆ ಮಾಡಿರುವುದಿಲ್ಲ ಆಡಿಟರ್ ತನಿಖೆ ಮಾಡಿರುವುದಿಲ್ಲ. ರೈತರು ತಮ್ಮಹೊಲದಲ್ಲಿ ಸ್ವಂತ ಹಣದಿಂದ ಕೆಲಸ ಮಾಡಿಕೊಂಡಾಗ ಆ ರೈತನ ಹೆಸರಿನಲ್ಲಿ ಭೇರೆ ವ್ಯಕ್ತಿ ಪೋಟೋ ಬಳಕೆ ಮಾಡಿ ರೈತನ ಹೆಸರಲ್ಲಿ ಅವರು ಯೋಜನೆಗಳ ಲಾಭವನ್ನು ಪಡೆದುಕೊಂಡು ಭ್ರಷ್ಟಾಚಾರ ವೆಸಗುತ್ತಿದ್ದಾರೆ.ಮತ್ತು ರಸ್ತೆ ವಿಚಾರವಾಗಿ ಹೊಂಬಾಟ್‌ಸ್‌ನ ಅಧಿಕಾರಿಗಳು ಸುಮಾರು 77000 ಅಂದಾಜು ಮೊತ್ತದ ಸಕಾರಕ್ಕೆಭರಣ ಮಾಡಲು ಆದೇಶ ಮಾಡಿರುತ್ತಾರೆ ಆದರೆ ಯಾವುದೇ ರೀತಿಯ ಹಣ ಭರಣ ಮಾಡಿರುವುದಿಲ್ಲ. ಪಂಚಾಯಿತಿಯಲ್ಲಿ ಅವರು ವೆಸಗುತ್ತಿರುವ ಭ್ರಷ್ಟಾಚಾರದ ಸಾಕಷ್ಟು ಪುರಾವೆಗಳಿದ್ದರೂ ಅವರ ಮೇಲೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕ್ರಮ ಜರುಗುಸುತ್ತಿಲ್ಲ. ಇದಕ್ಕೆ ಮೇಲ್ನೋಟಕ್ಕೆ ದೀಪಾ ಅವರಿಂದ ಸಹಿತ ಅವರಿಗೆ ಲಾಭವಿದೆ ಎಂದು ಕಾಣುತ್ತಿದೆ.
ಆದ ಕಾರಣ ಭ್ರಷ್ಟಾಚಾರ ವೆಸಗುತ್ತಿದ್ದ ಪಿಡಿಓ ದೀಪಾ ಅವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಭ್ರಷ್ಟಾಚಾರವೆಸಗಿದ ಭ್ರಷ್ಟ ಪಿಡಿಓ ಅವರ ಮೇಲೆ ಸೂಕ್ತ ಕ್ರಮ ಜರುಗಿಸದಿದ್ದರೆ ಮುಂದಿನ ದಿನದಲ್ಲಿ ಅವರ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಪ್ರಕಟಣೆಯ ಮೂಲಕ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಪ್ರಕಾಶ ಕಜೂರಿಗಿ, ಸೋಹೆಲ್ ಇನಾಮದಾರ, ಕುಮಾರ ಸಂಖದ ಮುಂತಾದವರು ಇದ್ದರು.