ಕರ್ನಾಟಕ ರಾಜ್ಯ ಸರಕಾರಿ NPS ನೌಕರರ ಸಂಘ (ರಿ), ಬೆಂಗಳೂರು, ತಾಲೂಕು ಘಟಕ ಇಂಡಿ. ಇದರ ಸರ್ವ ಸದಸ್ಯರು, ಇಂಡಿಯ ಪ್ರವಾಸಿ ಮಂದಿರದಲ್ಲಿ ಇಂದು ಇಂಡಿ ಶಾಸಕರಾದ ಯಶವಂತರಾಯಗೌಡ ವಿ.ಪಾಟೀಲ ರವರನ್ನು ಭೇಟಿ ಮಾಡಿ ಮನವಿ ನೀಡಿದರು.ದಿನಾಂಕ 01. 04.2006 ರಿಂದ ಸೇವೆಗೆ ಸೇರಿರುವ ಸರ್ಕಾರಿ ನೌಕರರಿಗೆ ಜಾರಿಗೊಳಿಸಿರುವ ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಈ ಹಿಂದೆ ಇದ್ದಂತೆ ನಿಶ್ಚಿತ ಪಿಂಚಣಿ ಯೋಜನೆ (ಹಳೆಯ ಪಿಂಚಣಿ ಯೋಜನೆ) ಯನ್ನು ಮರುಜಾರಿಗೆ ತರುವಂತೆ ಚಳೆಗಾಲದ ಅಧಿವೇಶನದಲ್ಲಿ ಸರ್ಕಾರವನ್ನು ಅಗ್ರಹಿಸುವ ಕುರಿತು ಮನವಿ ಮಾಡಿದರು. ಇದೇ ವೇಳೆ ಮಾತನಾಡಿದ ಶಾಸಕರು ನಾಳೆ ನಡೆಯುವ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.