ಕರ್ನಾಟಕ ನಗರ ನೀರು ಸರಬರಾಜು ಮತ್ತು ಒ.ಚ.ಮಂಡಳಿ ದಿನಗೂಲಿ ಟಾಸ್ಕವರ್ಕ ಗುತ್ತಿಗೆ ನೌಕರರ ಕಲ್ಯಾಣ ಸಂಘದ ವತಿಯಿಂದ ವಿಜಯಪುರ ನಗರ ನೀರು ಸರಬರಾಜು ವಿಭಾಗದ ಹೊರಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ಹೆಚ್ಚಿಸಲು ಒತ್ತಾಯಿಸಿ ಹೆಚ್ಚುವರಿ ಜಿಲ್ಲಾಧಿಕಾರಿಗಳಾದ ರಮೇಶ ಕಳಸದ ಅವರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒ.ಚ.ಮಂಡಳಿ ದಿನಗೂಲಿ ಟಾಸ್ಕವರ್ಕ ಗುತ್ತಿಗೆ ನೌಕರರ ಕಲ್ಯಾಣ ಸಂಘದ ಜಿಲ್ಲಾಧ್ಯಕ್ಷ ವಿಜಯ ಸಂಕದ ಮಾತನಾಡಿ ವಿಜಯಪುರ ನಗರ ನೀರು ಸರಬರಾಜು ಮಂಡಳಿ ಇಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲ ಹೋರ ಗುತ್ತಿಗೆ ನೌಕರರಿಗೆ ಬೆಳಗಾವಿ ಅಧಿವೇಶನದಲ್ಲಿ ಕನಿಷ್ಟ ವೇತನವನ್ನು 31,000 (ಮುವತ್ತೋಂದು ಸಾವಿರ ರೂಪಾಯಿಗಳು) ರೂಗಳಿಗೆ ಹೆಚ್ಚಿಸಬೇಕೆಂದು ಹಾಗೂ ಅದನ್ನು ಸಿಬ್ಬಂದಿಯ ಖಾತೆಗೆ ನೇರವಾಗಿ ಇಲಾಖೆಯ ಮೂಲಕವೇ ನೇರ ಪಾವತಿ ಮಾಡುವ ವ್ಯವಸ್ಥೆಯನ್ನು ಮಾಡಬೇಕು.ಹಾಗೂ ಈಗಾಗಲೆ ಮಹಾನಗರ ಪಾಲಿಕೆಯ ವ್ಯಾಪ್ತಿಯ ನೀರು ಸರಬರಾಜು ವಿಭಾಗದಲ್ಲಿ ಕಾರ್ಮಿಕರನ್ನು ಗುತ್ತಿಗೆದಾರರ ಮೂಲಕ ನೇಮಿಸಿಕೊಳ್ಳುವುದನ್ನು ರದ್ದುಗೋಳಿಸಿ 2005 ರಲ್ಲಿ ಸರರ್ಕಾರದ ಮೂಲಕವೇ ಗೆಜೆಟ್ ನ್ನು ಹೊರಡಿಸಿರುತ್ತಾರೆ, ಈ ಆದೇಶ ಜಾರಿಯಾಗಿ 17 ವರ್ಷ ಕಳೆದರೂ ಸರರ್ಕಾರವು ಇಲಾಖೆಯ ಮೂಲಕ ನೀರು ಸರಬರಾಜು ವಿಭಾಗದ ಹೋರ ಗುತ್ತಿಗೆಯನ್ನು ರದ್ದು ಮಾಡಿಲ್ಲ. ಈಗಲೂ ಸಹಿತ ಗುತ್ತಿಗೆದಾರರ ಮೂಲಕವೇ ಕಾರ್ಮಿಕರಿಗೆ ವೇತನ ಪಾವತಿ ಮಾಡುತ್ತಾರೆ ಇದರಿಂದ ಇಲ್ಲಿ ದುಡಿಯುವ ಕಾರ್ಮಿಕರಿಗೂ ಹಾಗೂ ಸರರ್ಕಾರದ ಖಜಾನೆಗೂ ಹೋರೆಯಾಗುತ್ತಿದೆ. ಆದ್ದರಿಂದ ತಾವೂಗಳು ರಾಜ್ಯ ಸರರ್ಕಾರ ನೌಕರರಿಗೆ 7ನೇ ವೇತನ ಆಯೋಗದ ಮೂಲಕ ಅವರ ಸಂಬಳವನ್ನು ಪರಿಷ್ಕರಿಸುತ್ತಿದ್ದು, ಅದೇ ರೀತಿ ಸರ್ಕಾರ ನೌಕರರ ಸರಿಸಮಾನವಾದ ಕೆಲಸವನ್ನು ನಾವು ಕೂಡಾ ಮಾಡುತ್ತಿದ್ದೇವೆ, ನಮ್ಮ ಕಾರ್ಮಿಕರಿಗೂ ಸಹ ಅದೇ ರೀತಿ ಎಪ್ರೀಲ್ 2023 ರಲ್ಲಿ ಕಾರ್ಮಿಕರ ಕನಿಷ್ಟ ವೇತನವನ್ನು 31, 000 ಕ್ಕೆ ಹೆಚ್ಚಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಸ್.ಐ.ವಾಲಿ, ಎಂ.ಜೆ.ಪಠಾಣ, ಸುನೀಲ ಮಣೂರ, ಎಸ್.ಐ. ಸೂರ್ಯವಂಶಿ, ಸುನೀಲ ಮುಚಕಂಡಿ, ಸುನೀಲ ಮಾದರ, ಆಸೀಫ ಅವಟಿ, ಎ.ಕೆ.ಮನಗೂಳಿ, ವಿಜಯ ನಿಂಬಾಳ, ಕಿರಣಭಜಂತ್ರಿ, ಆರೀಫಬಗಲಿ, ಮಲ್ಲಿಕಾರ್ಜುನ ಮಡಿವಾಳ, ಎನ್.ಎಂ.ಕಲ್ಯಾಣಿ, ಎಸ್.ಎಸ್. ಸುಗಿಹಾಳ, ಬಾಬು ಚಿಮ್ಮಲಗಿ, ನೂತನ ಬಾಗಾಯಿ ಮುಂತಾದವರು ಉಪಸ್ಥಿತರಿದ್ದರು.