ಇಂಡಿ: ಕರ್ನಾಟಕ ಕಾನೂನು ಸೇವಗಳ ಸಿವಿಲ್ ಜಡ್ಜ್ ನೇರ ನೇಮಕಾತಿ ಪರೀಕ್ಷೆಯಲ್ಲಿ ತಾಲೂಕಿನ ಸಾಲೋಟಗಿ ಗ್ರಾಮದ ನ್ಯಾಯವಾದಿ ಜಹೀರ್ ಅತನೂರ ರಾಜ್ಯಕ್ಕೆ 2ನೇ ರಾಂಕ್ ಪಡೆದು ಸಿವಿಲ್ ಜಡ್ಜ್ ಆಗಿ ನೇಮಕವಾಗಿದ್ದಾರೆ. ಕಿರಿಯ ವಯಸ್ಸಿನ ವಕೀಲ ಜಹೀರ ಅತನೂರ ಸಾಧನೆಗೆ ಇಂಡಿ ಪಟ್ಟಣದ ಬಿ.ಎಲ್.ಈ ಸಂಸ್ಥೆ ಹಾಗೂ ಪಟ್ಟಣದ ಯುವಕರು ಸನ್ಮಾನಿಸಿ ಹರ್ಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬಿ.ಎಲ್.ಈ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸದ್ದಾಂ ಹುಸೇನ್ ಜಮಾದಾರ, ಜುಬೇರ ಇಂಡಿಕರ, ಇರ್ಶಾದ ಬೋರಾಮಣಿ, ನವಾಜ ಮಕಾಂದಾರ, ಮೌಲಾನಾ ಮುಕ್ತಾರ ಉಮರಿ, ಸದ್ದಾಂ ಆಳಗಿ, ಶಕೀಲ್ ಅರಬ, ರಫೀಕ ಶೇಖ್, ಇಮ್ರಾನ ಮಕಾಂದಾರ ಸೇರಿದಂತೆ ಇತರರು ಇದ್ದರು.