ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಸಿದು ಬಿದ್ದ ನಿರ್ಮಾಣ ಹಂತದ ಸುರಂಗದಲ್ಲಿ ಕನಿಷ್ಠ 36 ಕಾರ್ಮಿಕರು ಸಿಲುಕಿರುವ ಶಂಕೆ ಇದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಉತ್ತರಕಾಶಿ ಪೊಲೀಸ್ ವರಿಷ್ಠಾಧಿಕಾರಿ ಅರ್ಪಣ್ ಯದುವಂಶಿ ಪ್ರಕಾರ, ಸಿಲ್ಕ್ಯಾರಾದಿಂದ ದಾಂಡಲ್‌ಗಾಂವ್‌ಗೆ ಸಂಪರ್ಕಿಸುವ ನಿರ್ಮಾಣ ಹಂತದ ಸುರಂಗದ ಒಂದು ಭಾಗವು ಶನಿವಾರ ರಾತ್ರಿ ಕುಸಿದಿದೆ. ಸುರಂಗದ ಒಂದು ಭಾಗವು ಬ್ರಹ್ಮಾಖಲ್-ಪೋಲ್ಗಾಂವ್‌ನ ಸಿಲ್ಕ್ಯಾರಾ ಭಾಗದಲ್ಲಿ ಪ್ರಾರಂಭದ ಸ್ಥಳದಿಂದ ಸುಮಾರು 200 ಮೀಟರ್ ಮುಂದೆ ಮುರಿದಿದೆ.