ಇಂಡಿ: ಮನುಷ್ಯ ಶರೀರದಲ್ಲಿರುವ ರಕ್ತ, ಜಾತಿ-ಧರ್ಮ ಆಧಾರಿತವಲ್ಲ, ರಕ್ತದಾನ ಮಾಡುವ ಮೂಲಕ ಅಪಾಯದಲ್ಲಿರುವ ರೋಗಿಯ ಜೀವ ರಕ್ಷಣೆಯಾಗುವುದನ್ನು ನಾವು ನಿತ್ಯ ಕಾಣುತ್ತಿದ್ದೇವೆ. ಆದ್ದರಿಂದ ರಕ್ತದಾನ ಮಾಡುವುದು ಮತ್ತು ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ. ರಕ್ತದಾನ ಮಾನವೀಯತೆಯ ಪ್ರತ್ಯಕ್ಷ ದರ್ಶನವಾಗಿದೆ ಎಂದು ವೈದ್ಯಾಧಿಕಾರಿ ಪ್ರಶಾಂತ ಧೂಮಗೊಂಡ ಹೇಳಿದರು.
ಭಾನುವಾರ ಪಟ್ಟಣದ ಶಿವಬಸವ ಕ್ಲಿನಿಕ್ನಲ್ಲಿ ಆಯೋಜಿಸಿದ ಉಚಿತ ಆರೋಗ್ಯ ತಪಾಸಣೆ ಹಾಗೂ ಬೃಹತ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು. ನಾವು ರಕ್ತದಾನ ಮಾಡುವ ಮೂಲಕ ಸಾವಿನ ದವಡೆಯಿಂದ ಮನುಷ್ಯನ ಜೀವವನ್ನು ಉಳಿಸಬಹುದು. ಈ ನಿಟ್ಟಿನಲ್ಲಿ ರಕ್ತದಾನ ಶಿಬಿರದ ಮೂಲಕ ಜನರ ಜೀವ ಉಳಿಸುವಂತಹ ಕಾರ್ಯ ಶ್ಲಾಘನೀಯ. ಮುಂದೆಯೂ ಇನ್ನಷ್ಟು ಇಂತಹ ಶಿಬಿರಗಳನ್ನು ಏರ್ಪಡಿಸಲಿ ಎಂದರು.
ಸಾವಿರಾರು ವಿದ್ಯಾರ್ಥಿಗಳು ತಜ್ಞವೈದ್ಯರಾಗಬೇಕೆಂದು ಬಯಸಿ ಕಷ್ಟಪಟ್ಟು ದುಡ್ಡು ಕಟ್ಟಿ ಮೆಡಿಕಲ್ ಕಾಲೇಜುಗಳಿಗೆ ಸೇರುತ್ತಿದ್ದಾರೆ. ಆದರೆ ಅವರಿಗೆ ಮಾನವನ ದೇಹದ ಬಗೆಗೆ ಪರಿಪೂರ್ಣವಾಗಿ ಅಭ್ಯಸಿಸಲು ಮಾನವನ ಸತ್ತ ದೇಹಗಳ ಕೊರತೆಯುಂಟಾಗಿದೆ.
ಸಮಾಜದಲ್ಲಿ ಒಬ್ಬ ವ್ಯಕ್ತಿ ಬದುಕಿದ್ದಾಗ ಮಾಡಿದ ಸಮಾಜಸೇವೆ, ಸಮಾಜದ ಪುಣ್ಯದ ಕೆಲಸಗಳು ಸ್ಮರಿಸುವ ನಿಟ್ಟಿನಲ್ಲಿ ರಕ್ತದಾನ, ನೇತ್ರದಾನ ನಡೆಯುತ್ತಿವೆ ಎಂದರೆ ಅದಕ್ಕೆ ಪುನೀತ್ ರಾಜಕುಮಾ ಅವರೇ ನಿದರ್ಶನ. ಎಂದರು. ಅವರು ಇಂದಿನ ಯುವಪೀಳಿಗೆಗೆ ಆದರ್ಶವಾಗಿದ್ದಾರೆ
ರಕ್ತದಾನ ಶಿಬಿರದಲ್ಲಿ ಕ್ಷೇತ್ರ ಶಿಕ್ಷಣ ಆರೋಗ್ಯ ಅಧಿಕಾರಿ ವಾಯ್. ಎಂ. ಪೂಜಾರಿ, ಡಾ. ಪ್ರಶಾಂತ ದೇಸಾಯಿ, ಜಿಲ್ಲಾ ಡಾಪೋ ಅಧಿಕಾರಿ, ಸುಮಾ ಮಮದಾಪುರ, ಸಾಯಿಕುಮಾರ ಉಕ್ಕಲಿ, ಸತಿಶ ಜಾಮಗೊಂಡಿ, ಶಿವು ದಶವಂತ, ಸೈಪನ್ ಮಕಂದಾರ, ವಿನೋದ ಚಿಕ್ಕಪಠ, ಡಾ. ಚೈತ್ರಾ ದೇಸಾಯಿ, ಶಿವಪ್ಪ ಬಡಿಗೇರ, ಸಚೀನ ಪಾಟೀಲ, ಮಲ್ಲು ಮೇತ್ರಿ, ಪುಟ್ಟು ಮೇಡೆದಾರ, ಯಲ್ಲಾಲಿಂಗ ಪೂಜಾರಿ, ಸೇರಿದಂತೆ ಜಿಲ್ಲಾ ಸರಕಾರಿ ರಕ್ತದಾನ ಘಟಕದ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು. ಸುಮಾರು 35 ಯುವಕರು ಸ್ವಯಂ ಪ್ರೇರಿತ ರಕ್ತದಾನ ಮಾಡಿದರು.