ಭಾರತೀಯ ಜನತಾ ಪಾರ್ಟಿ ನಾಗಠಾಣ ಮಂಡಲದ ಕಾರ್ಯಕಾರಿಣಿ ಸಭೆಯು ಶ್ರೀ ಮರಗಾಂಬಿಕಾ ದೇವಸ್ಥಾನದ ಸಭಾಭವನದಲ್ಲಿ ಜರುಗಿತು.ಕಾರ್ಯಕ್ರಮ ಭಾರತ ಮತ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮುಖಾಂತರ ಉದ್ಘಾಟನೆ ಆಯ್ತು. ವಿಜಯಪುರ ಬಿಜೆಪಿ ಜಿಲ್ಲಾ ಅಧ್ಯಕ್ಷರು ಶ್ರೀ ಆರ್ ಎಸ್ ಪಾಟೀಲ ಮಾತನಾಡಿ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರ ಪಕ್ಷ ಮುಂದಿನ ವಿಧಾನಸಭೆ ಚುನಾವಣೆಯನ್ನು ಗೆಲ್ಲುವುದರ ಮುಖಾಂತರ ಮತ್ತೊಮ್ಮೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಮಾಡುವುದಕ್ಕೆ ತಾವೆಲ್ಲರೂ ಶ್ರಮವಹಿಸಬೇಕೆಂದು, ಕೇಂದ್ರ ಮತ್ತು ರಾಜ್ಯಸರ್ಕಾರದ ಯೋಜನೆಗಳನ್ನು ಮನೆಮನೆಗೂ ತಲುಪಿಸುವಂತೆ ಮಾಡಬೇಕು ಎಂದು ಸಲಹೆ ನೀಡಿದರು.ನಾಗಠಾಣ ಮಂಡಲದ ಅಧ್ಯಕ್ಷರಾದ ಈಶ್ವರ ಶಿವೂರ ಇಲ್ಲಿಯವರೆಗೆ ಜಿಲ್ಲೆಯಿಂದ ತಾವು ಕೊಟ್ಟ ಚಟುವಟಿಕೆಯನ್ನು ಅತ್ಯಂತ ಉತ್ಸಾಹದಿಂದ ಮಾಡಿದ್ದೇವೆ.ನಮ್ಮಜೊತೆ ಎಲ್ಲ ಪದಾಧಿಕಾರಿಗಳು ಒಳ್ಳೆಯ ರೀತಿಯಿಂದ ಸಹಕಾರ ನೀಡಿದ್ದಾರೆ.
ಇದೇ ರೀತಿಯಾಗಿ ಮುಂದೆ ಬರುವ ವಿಧಾನಸಭಾ ಚುನಾವಣೆಯಲ್ಲಿ ನಾಗಠಾಣ ಮತಕ್ಷೇತ್ರದಲ್ಲಿ ಕೇಸರಿ ಬಾವುಟ ಹಾರಿಸುವುದು ಶತಸಿದ್ಧ ಎಂದು ಹೇಳಿದರು.ಜಿಲ್ಲಾ ಕಾರ್ಯದರ್ಶಿಯಾದ ಕೃಷ್ಣ ಗೋನಾಯ್ಕರ್ ಸಂಘಟನಾ ಅವಧಿಯನ್ನು ತೆಗೆದುಕೊಂಡು ಮುಂದೆ ಮಾಡುವ ಕಾರ್ಯ ಚಟುವಟಿಕೆಯ ಬಗ್ಗೆ ಮಾಹಿತಿ ನೀಡಿದರು. ಮತ್ತು ನೂತನವಾಗಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಆಯ್ಕೆಯಾದ ಮಹಾನಗರ ಪಾಲಿಕೆ ಸದಸ್ಯರಿಗೆ ಮಂಡಲ ವತಿಯಿಂದ ಸನ್ಮಾನ ಮಾಡಲಾಯಿತು. ಕಾರ್ಯಕ್ರಮವನ್ನು ಉಮೇಶ ತೊರವಿ ನಿರೂಪಿಸಿದರು. ಅನಿಲ ಬಿರಾದಾರ ವಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ ಬಿರಾದಾರ, ಸುರೇಶ ಬಿರಾದಾರ, ಸಾಬು ಮಾಶಳ, ಸಾಹೇಬಗೌಡ ಬಿರಾದಾರ, ಪಾರ್ವತಿ ಸ್ತಾವರ್ ಮಠ, ನೂತನ ಮಹಾನಗರ ಪಾಲಿಕೆಯ ಸದಸ್ಯರು ಸ್ವಪ್ನ ಕಣಮುಚನಾಳ, ಸಿದ್ದು ದಸ್ತ್ ರೆಡ್ಡಿ, ನಾಗರಾಜ್ ಬಿರಾದಾರ್, ನಿಗಮ ಮಂಡಳಿ ಸದಸ್ಯರು, ಎಪಿಎಂಸಿ ಸದಸ್ಯರು,ಚುನಾಯಿತ ಪ್ರತಿನಿಧಿಗಳು, ಮಂಡಲದ ಪದಾಧಿಕಾರಿಗಳು, ಯುವ ಮೋರ್ಚಾ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು, ಮುಖಂಡರು ಮಹಿಳಾ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.