ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹಿಂಸಾತ್ಮಕ ಘಟನೆಗಳು ಪ್ರಗತಿಪರ ಮತ್ತು ಜಾತ್ಯತೀತ ಭಾರತದ ಪ್ರತಿಷ್ಠೆಗೆ ಕಳಂಕ ತರುತ್ತಿವೆ ಮತ್ತು ಬಿಜೆಪಿ ‘ಬೆಂಕಿಗೆ ತುಪ್ಪ’ ಸೇರಿಯುತ್ತಿದೆ ಎಂದು ಶನಿವಾರ ಆರೋಪಿಸಿದ್ದಾರೆ. ಹೌದು ಇವರು ಇಂದು ನಡೆದ ಪುನರಚಿಸಲಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯೂಸಿ)ಯ ಮೊದಲ ಸಭೆಯಲ್ಲಿ ಮಾತನಾಡಿ ಆರೋಗ್ಯ, ಶಿಕ್ಷಣ, ಉದ್ಯೋಗ ಮತ್ತು ಆಹಾರ ಭದ್ರತೆಯ ಹಕ್ಕನ್ನು ಪಡೆಯಲು ಜಾತಿ ಸಮೀಕ್ಷೆಯೊಂದಿಗೆ ಜನಗಣತಿ ಪ್ರಕ್ರಿಯೆಯನ್ನು ತಕ್ಷಣವೇ ಪ್ರಾರಂಭಿಸಬೇಕು ಎಂದು ಪಕ್ಷ ಒತ್ತಾಯಿಸುತ್ತದೆ ಎಂದರು.