ಮರದಲ್ಲಿ ತೊಂಡೆಕಾಯಿ ಹರಿಯುವ ವೇಳೆ ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಖೈನೂರ ಗ್ರಾಮದಲ್ಲಿ ನಡೆದಿದೆ. ಶಾಂತಪ್ಪ ಗಡಗಿಮನಿ (10) ಮೃತಪಟ್ಟಿರುವ ದುರ್ದೈವಿಯಾಗಿದ್ದು, ದನಕಾಯುವ ವೇಳೆ ಮರದಲ್ಲಿ ತೊಂಡೆಕಾಯಿ ಹರಿಯಲು ಮರ ಏರಿದ್ದಾನೆ, ಈ ವೇಳೆ ಮರದ ಪಕ್ಕದಲ್ಲಿ ವಿದ್ಯುತ್ ಕಂಬದಲ್ಲಿನ ವಿದ್ಯುತ್ ಸ್ಪರ್ಶಿಸಿ ಮರದಿಂದ ಬಿದ್ದು ಶಾಂತಪ್ಪ ಸಾವನಪ್ಪಿದ್ದಾನೆ. ಸಿಂದಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.