ಕಲಕೇರಿ : ಪಟ್ಟಣಕ್ಕೆ ಸುತ್ತಲಿನ ಅನೇಕ ಗ್ರಾಮಗಳಿಂದ ವಿದ್ಯಾಭ್ಯಾಸ ಸೇರಿದಂತೆ ವಿವಿಧ ಕೆಲಸ ಕಾರ್ಯಗಳಿಗಾಗಿ ನಿತ್ಯನೂರಾರು ಜನರು ಬರುತ್ತಾರೆ ಆದರೆ ಸಮಯಕ್ಕೆ ಸರಿಯಾಗಿ ಬಸ್ಸುಗಳು ಬಾರದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ ಆಗೊಂದು ಈಗೊಂದು ಸಂಚರಿಸುವ ಬಸ್ಸುಗಳಲ್ಲಿ ಅನಿವಾರ್ಯ ವಾಗಿ ಒಬ್ಬರ ಮೇಲೊಬ್ಬರು ಬಿದ್ದು ಶಾಲೆ ಕಾಲೇಜಿಗೆ ಬರುವ ಊರು ಸೇರುತ್ತಿರುವ ಜನರನ್ನು ನಿತ್ಯ ಕಾಣಸಿಗುತ್ತಿದೆ ಸುಮಾ 20ರಿಂದ 30 ಕಿ۔ ಮೀ ಅಂತರದ ನೆರೆಯ ಗ್ರಾಮಗಳಿಂದ ಪ್ರಾಥಮಿಕ ಪ್ರೌಢ ಪದವಿ ಶಿಕ್ಷಣ ಸೇರಿದಂತೆ ಐ ಟಿ ಐ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ನಿತ್ಯ ಕಲಕೇರಿಗೆ ಬರುತ್ತಾರೆ.
ತೆಗೆಸಿಕೊಂಡರು ಸರ್ಕಾರಿ ಬಸ್ಸುಗಳು ಸರಿಯಾದ ಸಮಯಕ್ಕೆ ಬಾರದಿರುವುದರಿಂದ ಖಾಸಗಿ ವಾಹನಗಳಲ್ಲಿ ಬರುವ ಸ್ಥಿತಿ ಇದೆ ಎಂದು ವಿದ್ಯಾರ್ಥಿಗಳು ದೂರಿದರು ಸಿಂದಗಿ ಮಾರ್ಗದಿಂದ ಕಲಕೇರಿಗೆ ಬರುವ ಬಸ್ಸುಗಳು ನೇರವಾಗಿ ಬರದೇ ವಿವಿಧ ಗ್ರಾಮಗಳಿಗೆ ಹೋಗಿ ಬರುವುದರಿಂದ ವಿಳಂಬವಾಗುತ್ತದೆ ಎನ್ನುವುದು ಪ್ರಯಾಣಿಕರ ನಿತ್ಯದ ಗೋಳಾಟಾಗಿದೆ ಕಲಕೇರಿ ಕೆಂಬಾವಿ, ಕಲಕೇರಿ ತಾಳಿಕೋಟಿ ಬಸ್ಗಳು ಸಹ ಮುಂಜಾನೆ ಹೋದರೆ ಸಂಜೆಗೆ ವಾಪಸ್ ಬರುತ್ತವೆ. ಇದರಿಂದ ಪ್ರಯಾಣಿಕರಿಗೆ ಸಮಸ್ಯೆ ಆಗುತ್ತಿದೆ.