ತಮ್ಮಆರೋಗ್ಯವನ್ನು ಲೆಕ್ಕಿಸದೇ ಜನರ ರಕ್ಷಣೆ-ಶಾಂತಿ ಸುವ್ಯವಸ್ಥೆ ಕಾರ್ಯದಲ್ಲಿ ತೊಡಗಿರುವ ಪೊಲೀಸ್ ಅಧಿಕಾರಿ-ಸಿಬ್ಬಂದಿಗಳು ಸಹ ತಮ್ಮ ಒತ್ತಡದ ಜೀವನದ ಮಧ್ಯೆಯೇ ಇಂತಹ ಕ್ರೀಯಾಶೀಲ-ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮೂಲಕ ಒತ್ತಡ ನಿವಾರಣೆಗೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರು ಸಲಹೆ ನೀಡಿದರು.ವಿಜಯಪುರ ನಗರದ ಪೋಲಿಸ್ ಕವಾಯತು ಮೈದಾನದಲ್ಲಿ ಆಯೋಜಿಸಲಾದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಶಾಂತಿಯ ಸಂಕೇತವಾದ ಪಾರಿವಾಳಗಳನ್ನು ಹಾರಿ ಬಿಡುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿ, ಇಂದಿನ ದಿನಮಾನಗಳಲ್ಲಿ ದೇಹವನ್ನು ಸದೃಢವಾಗಿಟ್ಟುಕೊಳ್ಳುವುದು ಸಹ ಅತ್ಯವಶ್ಯಕವಾಗಿದೆ.
ವ್ಯಾಯಾಮ ಕ್ರೀಡೆ ಚಟುವಟಿಯಿಂದಿದ್ದು,ದೇಹ ಸದೃಢತೆಯನ್ನು ಕಾಯ್ದುಕೊಳ್ಳಬೇಕು.ಆರೋಗ್ಯಕರ ಮನಸ್ಸಿಗಾಗಿ ನಾವು ನಿರಂತರವಾಗಿ ಕ್ರೀಡೆ ಸೇರಿದಂತೆ ಇತರೆ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮೂಲಕ ಕ್ರೀಯಾಶೀಲ ಮನಸ್ಸನ್ನು ಹೊಂದಲು ಸಾಧ್ಯ ನಮ್ಮದೇಹವೆ ನಮ್ಮಜೀವನದ ಸಂಗಾತಿ, ಹುಟ್ಟಿನಿಂದ ಸಾವಿನವರೆಗೂ ನಮ್ಮ ದೇಹ ನಮ್ಮೊಂದಿಗಿರುತ್ತದೆ.ಅಮೂಲ್ಯವಾದ ದೇಹ ಹಾಗೂ ಆರೋಗ್ಯಕರ ಮನಸ್ಸನ್ನು ಕಾಪಾಡಿಕೊಳ್ಳಲು ಕ್ರೀಡಾ ಚಟುವಟಿಕೆಗಳು ಸಹಕಾರಿಯಾಗಿವೆ ಎಂದು ಹೇಳಿದರು. ದೇಶದ ಪ್ರಧಾನ ಮಂತ್ರಿಗಳು ಸಹ ಸಧೃಢ ದೇಶವನ್ನಾಗಿ ರೂಪಿಸುವ ನಿಟ್ಟಿನಲ್ಲಿ 2017ರಲ್ಲಿ ಯೋಗ ದಿನಾಚರಣೆಯನ್ನು ಪ್ರತಿವರ್ಷ ಜೂನ್. 21 ರಂದು ಆಚರಿಸಲಾಗುತ್ತಿದೆ.ದೇಹ ಸದೃಢತೆ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಬೇಕು ಎನ್ನುವ ನಿಟ್ಟಿನಲ್ಲಿ 2019ರಲ್ಲಿ ಪಿಟ್ ಇಂಡಿಯಾ ಆರೋಗ್ಯವಂತ ದೇಶ ಕಟ್ಟುವ ಚಳುವಳಿಗೆ ಚಾಲನೆ ನೀಡಿದ್ದಾರೆ. ಕ್ರೀಡೆಯಲ್ಲಿ ಶೂನ್ಯ ಬಂಡವಾಳ ಅದರ ಉಪಯೋಗ ಅನಿಯಮಿತ, ಪ್ರಧಾನಿಗಳು ಯುವ ಜನರ ಆರೋಗ್ಯದ ಕುರಿತು ಒತ್ತು ನೀಡುತ್ತಿದ್ದಾರೆ. ನಮ್ಮದೈನಂದಿನ ಬದುಕಿನಲ್ಲಿ ಕ್ರೀಡೆಯನ್ನು ಅಳವಡಿಸಿಕೊಳ್ಳಬೇಕು.ದಿನನಿತ್ಯದ ಜೀವನದಲ್ಲಿ ಅರ್ಧ ಗಂಟೆ ಕಾಲ ನಡಿಗೆ, ಓಟ, ಈಜು, ಇತ್ಯಾದಿ ರೂಢಿಸಿಕೊಳ್ಳಬೇಕು.ನಮ್ಮಆರೋಗ್ಯಬಹುಮುಖ್ಯವಾಗಿದ್ದು, ಆರೋಗ್ಯವಂತ ಜೀವನ ನಡೆಸಲು ಕ್ರೀಡೆಗಳು ಸಹಕಾರಿಯಾಗಿವೆ ಎಂದು ಹೇಳಿದರು. ಪೋಲಿಸ್ ಇಲಾಖೆಯ ಬಿಡುವಿಲ್ಲದ ಕಾರ್ಯ, ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ, ಕೋವಿಡ್ ಮಹಾಮಾರಿ ಸಂದರ್ಭದಲ್ಲಿ ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವುದರ ಮೂಲಕ ಆಂತರಿಕ ಭದ್ರತೆ ನೀಡುವುದು, ಹಗಲು-ರಾತ್ರಿಯೆನ್ನದೇ, ಜನರ ಭದ್ರತೆಗಾಗಿ ಕಾರ್ಯನಿರ್ವಹಿಸುತ್ತಿರುವ ಪೋಲಿಸ್ ಇಲಾಖೆಯ ಕಾರ್ಯಕ್ಕೆ ಪ್ರತಿಯೊಬ್ಬರು ಅಭಿನಂದನೆ ಸಲ್ಲಿಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ ಶಿಂಧೆ ಅವರು ಮಾತನಾಡಿ, ನಮ್ಮಬಾಲ್ಯ ಜೀವನದಲ್ಲಿ ಕ್ರೀಡೆ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿತ್ತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ ಶಿಂಧೆ ಅವರು ಮಾತನಾಡಿ, ನಮ್ಮಬಾಲ್ಯ ಜೀವನದಲ್ಲಿ ಕ್ರೀಡೆ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿತ್ತು. ಇಂದಿಗೂ ಹಳ್ಳಿಗಳಲ್ಲಿ ಹಲವು ಗ್ರಾಮೀಣ ಕ್ರೀಡೆಗಳು ಪ್ರಚಲಿತದಲ್ಲಿವೆ. ಶಿಕ್ಷಣದಷ್ಟೇ ಮಹತ್ವ ಕ್ರೀಡೆಗೂ ನೀಡಬೇಕು. ವೃತ್ತಿ ಜೀವನದ ಒತ್ತಡದ ಮಧ್ಯೆಯೂ ಜೀವನೋಲ್ಲಾಸಕ್ಕಾಗಿ ದೈಹಿಕ ಶ್ರಮ, ಕ್ರೀಡೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಇಲ್ಲಿ ಆಯೋಜಿಸಿರುವ ಕ್ರೀಡಾಕೂಟದಲ್ಲಿ ಎಲ್ಲರೂ ಕ್ರೀಡಾ ಮನೋಭಾವದಿಂದ ಭಾಗವಹಿಸಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಯಶಸ್ವಿಯಾಗಿ ಕ್ರೀಡಾಕೂಟ ನಡೆಸುವಂತೆ ಕರೆ ನೀಡಿದರು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ ಅವರು ಮಾತನಾಡಿ, ಸ್ಪೂರ್ತಿದಾಯಕ ಜೀವನ ನಿರ್ವಹಣೆಗೆ ಪ್ರತಿನಿತ್ಯ ಕಾರ್ಯನಿರ್ವಹಣೆಯಲ್ಲಿ ನಮ್ಮ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು.
ಒತ್ತಡದಿಂದ ಹೊರಬಂದು ಚೈತನ್ಯದಾಯಕ, ಸ್ಪೂರ್ತಿದಾಯಕ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು. ಈ ನಿಟ್ಟಿನಲ್ಲಿ ವಾರ್ಷಿಕ ಕ್ರೀಡಾಕೂಟಗಳ ಆಯೋಜನೆ ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ಕ್ರೀಡಾಕೂಟಗಳಲ್ಲಿ ಆಸಕ್ತಿಯಿಂದ ಭಾಗವಹಿಸಬೇಕು. ಸೋಲು-ಗೆಲವನ್ನು ಲೆಕ್ಕಿಸದೇ ಸ್ಪೂರ್ತಿ, ಚೈತನ್ಯದಿಂದ ಮೂರು ದಿನಗಳ ಕಾಲ ನಡೆಯುವ ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಎಂದು ಕರೆ ನೀಡಿದರು.
ಇದಕ್ಕೂಮೊದಲು ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ವಿಜೇತ ಮನೋಹರ ದೇಸಾಯಿ ಅವರು ಕ್ರೀಡಾ ಜ್ಯೋತಿಯನ್ನು ನೀಡುವುದರ ಮೂಲಕ ಕ್ರೀಡಾಕೂಟಕ್ಕೆ ವಿದ್ಯುಕ್ತ ಚಾಲನೆ ದೊರೆಯಿತು. ಕ್ರೀಡಾಪಟುಗಳಿಂದ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
ಕಾರ್ಯಕ್ರಮದಲ್ಲಿ ಎನ್.ಸಿ.ಸಿ. ಅಧಿಕಾರಿ ಗಿರೀಶ ಶಿಂಧೆ, ಐಆರಿಕಮಾಂಡೆಂಟ್, ಆರ್.ಎ.ಎಫ್.ಡೆಪ್ಯೂಟಿ ಕಮಾಂಡೆಂಟ್ ಪ್ರೀತಾ ಸಿ., ಕೇಂದ್ರ ಕಾರಾಗೃಹದ ಅಧೀಕ್ಷಕ ಮ್ಯಾಗೇರಿ, ಎನ್ಟಿಪಿಸಿ ಪ್ರಧಾನ ವ್ಯವಸ್ಥಾಪಕ ಅನಿರುದ್ಧ ಸಿಂಗ್ ಉಪಸ್ಥಿತರಿದ್ದರು.