ಇಂಡಿ: ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದಾಗಿ ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯ ಮಂತ್ರಿ ಡಿ.ಕೆ ಶಿವುಕುಮಾರ ಚುನಾವಣಾ ಪೂರ್ವ ಕೊಟ್ಟ ಮಾತು ಉಳಿಸಿದ್ದಾರೆ. ಬಿಜೆಪಿಯವರು ಯಾವ ಯೋಜನೆ ಮಾಡಿದ್ದಾರೆ. ನಿಮಗೆ ಮತ ಕೇಳುವ ನೈತಿಕತೆ ಇಲ್ಲ ಎಂದು ಜಿಲ್ಲಾ ಎಸ್ಸಿ., ಎಸ್.ಟಿ ಕಾಂಗ್ರೆಸ್ ಉಪಾಧ್ಯಕ್ಷ ಶಿವಾನಂದ ಮೂರಮನ್ ಹೇಳಿದರು.
ತಾಲೂಕಿನ ಬೆಳಕನಹಳ್ಳಿ, ಅರ್ಥಗಾ, ರಾಮತೀರ್ಥ ತಾಂಡಾ, ರಾಜನಾಳ ಎಲ್.ಟಿ ಗ್ರಾಮಗಳ 2024ರ ಗ್ಯಾರಂಟಿ ಯೋಜನೆಗಳ ಪತ್ರ ವಿತರಣೆ ಮಾಡಿ ಮಾತನಾಡಿದ ಅವರು ರಾಜ್ಯ ಕಾಂಗ್ರೆಸ್ ಸರಕಾರ ಗೃಹ ಲಕ್ಷ್ಮಿ ಯೋಜನೆ, ಶಕ್ತಿ ಯೋಜನೆ, ಯುವ ನಿಧಿ, ಅನ್ನಭಾಗ್ಯ ಯೋಜನೆಯಡಿ 5ಕೆ.ಜಿ ಅಕ್ಕಿ ಮತ್ತು ಉಳಿದ 5 ಕೆ.ಜಿ ಅಕ್ಕಿಯ ಬದಲಾಗಿ ಹಣ ನೆರಖಾತೆಗೆ ಜಮಾ ಮಾಡುಲಾಗುತ್ತಿದೆ. ಗೃಹಜ್ಯೋತಿ ಯೋಜನೆ, ಹೀಗೆ ಪಂಚ ಗ್ಯಾರಂಟಿಗಳ ಮೂಲಕ ಬಡವರ ಆತ್ಮ ಬಲ ಹೆಚ್ಚಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದು 10 ವರ್ಷ ಕಳೆದರೂ ಯಾವುದೇ ಹೇಳಿಕೊಳ್ಳುವಂತ ಅಭಿವೃದ್ದಿ ಕೆಲಸ ಮಾಡದೆ ಜಾತಿ,ಧರ್ಮದ ವಿಷಬೀಜ ಬಿತ್ತುತ್ತಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅಚ್ಚೇ ದಿನಗಳು ಬರುತ್ತವೆ ಎಂದು ಹೇಳುತ್ತಿದ್ದರು. ನಂಬಿಕೆಯಿಂದ ಜನರು ಮತ ಹಾಕಿ ಅಧಿಕಾರಿ ಕೊಟ್ಟರೂ ಒಳ್ಳೆಯ ದಿನಗಳು ಬರಲೇ ಇಲ್ಲ. ಇಂತಹ ಭ್ರಷ್ಠ ಬಿಜೆಪಿಯನ್ನು ಕಿತ್ತಿ ಎಸೆಯಬೇಕು. ಲೋಕಸಭಾ ಅಭ್ಯರ್ಥಿ ಪ್ರೊ.ರಾಜು ಆಲಗೂರ ಒಳ್ಳೆಯ ಜಾಣ ವ್ಯಕ್ತಿಯಾಗಿದ್ದು ಇವರಿಗೆ ಮತ ನೀಡಿ ಆಯ್ಕೆ ಮಾಡಬೇಕು ಎಂದರು.
ಕುಲಪ್ಪ ವಠಾರ, ರಾಕೇಶ ಸಿಂಗೆ, ಕುಲಪ್ಪ ಸಿಂಗೆ, ರಾಕೇಶ ಕಾಂಬಳೆ, ರಾಕೇಶ ಎಂಟಮಾನ್, ರೇವಣಸಿದ್ದ ಯಂಟಮಾನ ಸೇರಿದಂತೆ ಅನೇಕ ಮಹಿಳೆಯರು ಇದ್ದರು.