ನಿನ್ನೆಯಷ್ಟೇ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಸಿದ್ದರಾಮಯ್ಯ ಇಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಬೆಂಗಳೂರಲ್ಲಿ ಸಂಚರಿಸಲು ಜೀರೋ ಟ್ರಾಫಿಕ್ ಪ್ರೋಟೋಕಾಲ್ ನೀಡದಂತೆ ತಿಳಿಸಿದ್ದಾರೆ.ನನ್ನ ವಾಹನ ಸಂಚಾರಕ್ಕೆ ‘ಜೀರೋ ಟ್ರಾಫಿಕ್’ ಪ್ರೋಟೋಕಾಲ್ ಅನ್ನು ಹಿಂಪಡೆಯುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನು ಕೇಳಿದ್ದೇನೆ. ಝೀರೋ ಟ್ರಾಫಿಕ್ನಿಂದಾಗಿ ನಿರ್ಬಂಧಗಳಿರುವ ರಸ್ತೆಯುದ್ದಕ್ಕೂ ಪ್ರಯಾಣಿಸುವ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ನೋಡಿದ ನಂತರ ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದಿದ್ದಾರೆ.